ಮಾಸಿದ ಕವಿತೆ
ಒಂದೊಳ್ಳೆ ಕವಿತೆ ಮಾಸಿತು
ಅವಳ ನೆನಪಿನಂಚಲಿ
ಬಿಡದೆ ಕಾಡಿದ ನೆನಪುಗಳು ಯುಗದಾಚೆಗೆ ಎಳೆದೊಯ್ದವು
ಕನಸಿಗೆ ದೊರೆಯದ ಮುಕ್ತಿ
ಮರೆವು ಬಾರದ ನೆನಪು ಕನಸಾಗಿ ಬಂದಿಸಿತ್ತು
ಅವಳ ಮೌನ ಕಥೆಗೆ ಶೃಂಗಾರ ಕಾಣದೆ ಬಂದಿಯಾಗಿತ್ತು.
- ರವಿಕುಮಾರ
07 May 2017, 05:34 pm
Download
App from Playstore: