ಉಸಿರೇ... ಉಸಿರೆ..
ಯಾವುದೊ ಹಕ್ಕಿಯ ಹಿಕ್ಕೆಯಲಿ ಬಿದ್ದು
ಮೊಳಕೆಯೊಡೆದ ಸಸಿ ನಾನು...!!
ಮಳೆಯ ಆಸರೆಯಲ್ಲಿಯೆ ಬದುಕು
ಕಟ್ಟಿಕೊಂಡ ಬವಣೆ ನನ್ನದು..!!!
ಅದೇಷ್ಟೊ ದನ-ಕರು ಕುರಿ-ಮೇಕೆಗಳ
ಬಾಯಿಂದ ಉಳಿದು ಅಡಿಗಳೆತ್ತರ ಬೆಳೆದು
ಬಿರುಗಾಳಿಯ ಹೊಡೆತಕ್ಕೆ ನೆಲಮುಟ್ಟಿ ಎದ್ದು ಮತ್ತದೆ ಬಾಯಾರಿಕೆಯಲಿ ಹನಿ ಮಳೆಗಾಗಿ ಕಾದು...!!
ಹತ್ತು ಹಲವು ವರ್ಷಗಳ ನಂತರ
ನನ್ನ ನಾನು ವಿಸ್ತರಿಸಿಕೊಂಡು
ಹಕ್ಕಿಪಿಕ್ಕಿಗಳಿಗೆ ಆಸರೆಯ ನೀಡಿ
ತಂಪು ನೇರಳ ನೀಡಿ, ಪ್ರಕೃತಿಯ ಭಾಗವಾಗಿದ್ದೆ...!!
ಸ್ವಾರ್ಥ ಮಾನವನೆ ನಿನ್ನ ವಿಕೃತ
ಮನಸ್ಸಿನ ಮುಂದೆ ಪ್ರಕೃತಿಯೊಳ
ನಮ್ಮ ಜೀವಕೆ ಬೆಲೆಯುಂಟೆ..?
ನನ್ನ ಬುಡಕೆ ಹಾಕಿದ ಕೊಡಲಿ ಪೆಟ್ಟಿಗೆ
ಮುಂದೆ ಕಾದಿದೆ ಪ್ರತಿಪೆಟ್ಟು ನಿನಗೆ ಅರಿವೂಂಟೆ......!!!
- ಪಿ ಅನಿ...
07 May 2017, 09:32 pm
Download App from Playstore: