ನನ್ನೊಲವ ಹರಸಿ .....

ನನ್ನೊಲವಿನ ಅರಸಿ
ಹುಡುಕುತಿರುವೆ ನಿನ್ನರಸಿ
ನಡೆದಿರುವೆ ನನ್ನ ದೂರ ಸರಿಸಿ
ಬರಬಾರದೆ ಒಮ್ಮೆ ಕಣ್ಣೀರ ಒರಸಿ

ಕಂಡೆ ಹೂವಂತ ‌ಕನಸುಗಳ ನಿನಗಾಗಿ
ಕಾಡುತಿವೆ ಇಂದು ಅವುಗಳು‌ ಮನಕೆ ಮುಳ್ಳಾಗಿ
ಹೊರಟಿರುವೆ ನೀನು ಒಂದು ಕನಸಾಗಿ
ನಾ ಏನು ‌ಅರಿಯದೆ ನಿಂತಿರುವೆ ನಿನ್ನ ನೆನಪಾಗಿ

ಬದುಕೆಂದರೆ ಎಂದರೆ ಹಾವು ಏಣಿ ಆಟವೇನು
ಕಚ್ಚಿ‌ ಕೆಳಗೆದೂಡುವ ಚಟವಿರಬಹುದೇನು..
ನಾನು ಆಟದೊಳಗೆ‌ ನಡೆಸುವ ಕಾಯಿಯಾಗಿರುವೆನು ಆಟದೊಳಗೆ ನನ್ನ‌ ಗೆಲ್ಲಿಸುವ ಏಣಿಯಾಗಲರೆಯೇನು?

ಕಾಯುತಿರುವೆ ನಿನಗಾಗಿ ನಾನು
ನನ್ನ ಬಾಳ ಮನದನ್ನೆ ನೀನು
ನೀನೆ‌ ದೂರ ಸರಿಸಿ ಹೋದರೆ ನನ್ನ
ನಾ ಬಾಳುವುದಾದರು ಹೇಗೆ ಚಿನ್ನ

- ಶ್ರೀಕಾವ್ಯ

09 May 2017, 04:17 pm
Download App from Playstore: