ಅವಳಿಗಾಗಿ
ಪ್ರತಿದಿನವು ಬರೆಯುವೆನು ಅವಳಿಗಾಗಿ
ಕನಸುಗಳು ಸತ್ತ ಜೀವಕ್ಕೆಂದು
ಹೊಸ ಕನಸುಗಳ ಹೊತ್ತು ತಂದ
ಮಂದಾರ ಅವಳು
ನನ್ನ ಬಾಳ ಸಿಂಗಾರ
ಜೀವನವೆಂದರೆನೆಂದು ಅರಿಯದೆ ಅಲೆಯುತ್ತಿದ್ದೆ
ಪ್ರೀತಿಯಂದರೆನೆಂದು ತಿಳಿಯದೆ ಪರಿತಪಿಸುತ್ತಿದ್ದೆ
ಜೀವಕೆ ಜೀವಾಳವಾದಳು
ಪ್ರೀತಿಗೆ ಪ್ರೇಮ ದೇವತೆಯಾದಳು
ಪ್ರತಿದಿನವು ಬರೆಯುವೆ ಅವಳ ಬಗ್ಗೆಯೆ
ಆದರು ಆಗುತ್ತಿಲ್ಲ
ಪ್ರೇಮ ದೇವತೆಯ ಬಣ್ಣಿಸಲು
ಅವಳ ಕಂಗಳಿನ ಬಿಳುಪು
ಮುಗಿಲಾಗಿನ ಹೊಳಪು
✍ಮೌನಿ ೯೭೩೯೬೫೧೧೦೧
- ಮೌನಿ
10 May 2017, 09:43 pm
Download App from Playstore: