ಆರ್ಥಿಕತೆ
ಹವಣಿಸುತ್ತಿರುವೆವು ಸಾಧಿಸಲು "ಆರ್ಥಿಕತೆಯಲಿ ಎತ್ತರದ ಸ್ಥಾನ"
ಅದರಿಂದ ಆಗುವುದೇನಿದೆ ಪ್ರಯೋಜನ
ಕೆಲವರ ಮನೆಯಲ್ಲಿಯೇ ಕೊಳೆಯುತ್ತಿದೆ ಕಾಂಚಣ
ಬದುಕುತ್ತಿರುವರು ಕಟ್ಟಿಕೊಂಡು ಅವರದ್ದೆ ಒಂದು ಬಣ
ಅವರಿಗೆ ಅರಿವಾಗಿವುದೆ ಆಗುತಿರುವ ಸಮಸ್ಯೆಗಳ ಉಲ್ಬಣ
ಇನ್ನೂ ಅರ್ಧದಷ್ಟಿದೆ ದೇಶದಲಿ ತೀರ ಬಡತನ
ಆ ಜನರದ್ದು ಹೃದಯ ಶ್ರೀಮಂತಿಕೆಯ ಮನ
ಅವರು ಪ್ರಾಪಂಚಿಕ ಹಕ್ಕುಗಳ ಅರಿವಿಲ್ಲದ ಜನ
ಅವರತ್ತಿರ ಎಲ್ಲಿ ಬರಬೇಕು ಬದುಕಲು ಬೇಕಿರುವಷ್ಟು ಹಣ
ಎಳೆಯಲಾಗದೆ ಜೀವನ ಬಂಡಿಯ ಆಗುತ್ತಿರುವರು ಹೆಣ
ರಾಜಕೀಯದವರು ಹೊತ್ತಿಕೊಂಡಿರುವರು ಅವರ ಋಣ
ಆದರು ತೋರರು ಆಸಕ್ತಿ ಜನ ಹೊಂದಿದರು ಮರಣ
ಅವರೇನಿದ್ದರು ಚುನಾವಣೆ ಸಮಯದಲ್ಲಷ್ಟೆ ಬರುವರು ಹಿಡಿಯಲು ಚರಣ
ಆಮೇಲೆ ಅವರ ಸಿಗುವುದಿಲ್ಲ ಹುಡುಕಿ ಜನರು ಸೇರಿದರು ಮಣ್ಣ
ಇದ ನೋಡಿ ನೋಡಿ ಬಡಜನ ಆಗಿರುವರು ಹೈರಾಣ
ಇದೆಲ್ಲ ಕಂಡರು ಕಾಣದಂತೆ ನೋಡುತ ತೋರುತಿರುವೆವು ಸಣ್ಣತನ
ಪ್ರತಿಭಟಿಸಿ ನೊಂದವರ ಜೊತೆ ನಿಂತು ಯಾವಗ ಸಾರುವುದು ಹಿರಿತನ
ಎಲ್ಲರೂ ಜೊತೆ ಸೇರಿ ಸಮನಾಗಿ ಒಂದೇ ಮನದಿ ಗುರಿಯೆಡೆಗೆ ಸಾಗುವುದಲ್ಲವೆ ಜೀವನ
ಆಗಲೇ ಆಗುವುದು ನಿಜವಾದ "ಆರ್ಥಿಕತೆಯ ಅರ್ಥ" ಸಂಪೂರ್ಣ
ಯಾವಾಗ ಬರುವುದು ಭಾರತ ದೇಶದಲಿ ಅಂಥ ಸುಂದರ ಕ್ಷಣ
- ಶ್ರೀಕಾವ್ಯ
10 May 2017, 11:29 pm
Download App from Playstore: