ಭ‌ವಿಷ್ಯ‌

ಕ‍ಂತೆ ಕ‌ನ‌ಸುಗ‌ಳು ಕ‌ಣ್ಣ‌ಲ್ಲಿ
ಆಸೆಗ‌ಳ‌ ಮೂಟೆ ಬೆನ್ನ‌ ಮೇಲೆ
ಪ್ರಿಯ‌ತ‌ಮೆಯ‌ ನೆನ‌ಪುಗ‌ಳು ಎದೆಯ‌ಲ್ಲಿ
ಇರ‌ಲು ನೆಲೆಯಿಲ್ಲ‌ದೆ ಗೂಡು ಕ‌ಟ್ಟಿಕೊಳ್ಳುವ‌
ತ‌ವ‌ಕ‌ ಮ‌ನ‌ದ‌ಲ್ಲಿ
ಭ‌ವಿಷ್ಯ‌ದ‌ ಬ‌ಗ್ಗೆ ಯೋಚಿಸುತ್ತ‌
ಸ್ವ‌ಲ್ಪ‌ ದೂರ‌ ನೆಡೆದು ಹಿಂತಿರುಗಿ ನೋಡಿದೆ
ಸಂಜೆಗ‌ತ್ತ‌ಲ‌ಲ್ಲಿ ಎಲ್ಲೋ ಮ‌ರೆಯಾ‌ದಂತಿರುವ‌
ನ‌ನ್ನೂರಿನ‌ ಅಸ್ಪ‌ಸ್ಟ‌ ಚಿತ್ರ‌ಣ‌ ಕ‌ಣ್ಣೀರ‌ ಹ‌ನಿಯ‌ಲ್ಲಿ
ಸ್ತ‌ಭ್ದ‌ಗೊಂಡಿತ್ತು,
ಹ‌ೃದ‌ಯ‌ ತುಂಬಿ ಬಂದು
ಭಾರ‌ವಾದ‌ ಹೆಜ್ಜೆಯ‌ನಿಟ್ಟು ಮುಂದೆ ಸಾಗಿದೆ.

- ಶಶಿಧರ ಹೆಚ್ ಎನ್

11 May 2017, 05:48 am
Download App from Playstore: