ನಿನ್ನೊಲವ ಪಾಠಶಾಲೆ.....
ತೆರೆಯೆ ಒಮ್ಮೆ ನಿನ್ನೊಲವ ಪಾಠಶಾಲೆ
ಅರಿಯಬೇಕು ನಿನ್ನ ಕನಸಿನ ಮಾಲೆ
ನಿನ್ನೊಲವ ಶಾಲೆಗೆ ನಾನೊಬ್ಬನೆ ಶಿಕ್ಷಾರ್ಥಿ
ಆಗಲೇ ಬೇಕು ನಿನ್ನ ಮೆಚ್ಚಿನ ವಿದ್ಯಾರ್ಥಿ
ಹಾಕುವೆನು ಎಂದೂ ತಪ್ಪದೆ ಹಾಜರಾತಿ
ನೀನಿರಲು ಹೇಗೆ ತೋರಲಿ ಅನುಪಸ್ಥಿತಿ
ನಿನ್ನೊಲವ ತಿಳಿಯಲು ಇರುವುದೇನೆ ಮಿತಿ
ನಿನ್ನ ನೋಡುತ ಕಳೆದೋಗುವುದು ನನ್ನಯ ಮತಿ
ಹೊತ್ತು ತರುವೆನೆ ಪ್ರೀತಿಯ ಪಾಠಿಚೀಲ
ಒಲವ ಕಲಿಸಿ ಬೆಳಗೆ ನನ್ನಯ ಬಾಳ
ಎರೆಯೆ ನಿನ್ನೊಲವಿನ ಪ್ರೀತಿಯ ಧಾರೆ
ನಾನೆಂದು ನಿನಗೆ ನೋವನು ತೋರೆ
ನನಗಾಗಿ ತೆರೆದು ನೋಡು ನಿನ್ನೊಲವ ಶಾಲೆ
ನಿನಗಾಗಿ ಕಲಿತು ಬರುವೆ ಪ್ರೀತಿಯ ಲೀಲೆ
ನೀನೆ ಹಾಕಬೇಕು ನನ್ನ ಕೊರಳಿಗೆ ಮಾಲೆ
ನಿನ್ನ ಬಿಟ್ಟು ಬಾಳಲಾರೆನು ನನ್ನ ತಿಳಿಯೆ ಬಾಲೆ
- ಶ್ರೀಕಾವ್ಯ
13 May 2017, 12:08 pm
Download App from Playstore: