ನನ್ನವಳು..............
ಬೆಳದಿಂಗಳ ಬೆಳಕಲ್ಲಿ ಮಿನುಗುವ
ತಾರೆಯಾದ ನನ್ನ ಪ್ರೇಯಸಿ
ಚುಂಬನದಿ ನಗಿಸುತ್ತಾಳೆ ನನ್ನ
ಶಶಿಯ ರೂಪದಲ್ಲಿ ಖುಷಿಯಾಗಿ.
ಬರಿದಾದ ಕತ್ತಲಲ್ಲಿ ಬಾಡಿರುವ
ನನ್ನ ಹೃದಯಕ್ಕೆ ಸಿಹಿಯಾದ
ಕ್ಷೀರವಾಗಿ ಬರುವಳು
ಅಮೃತಧಾರೆಯಾಗಿ.............
ಸೊಗಸಾದ ಮಾತಲ್ಲಿ ಮೃದುವಾಗಿ
ನಗುತ್ತಾ ಉತ್ತರಿಸುವಳು ನನ್ನ
ರೂಪಕ್ಕೆ ಪ್ರತಿಬಿಂಬ ತಾನೆಂದು.
ನನ್ನಲ್ಲೇ ಅವಳು ಇರುವಳೆಂದು......
ಅವಳಿಗಾಗಿ ಮುಗಿಲ ಕಡೆ ತಲೆಯೆತ್ತಿ
ನೋಡುತ್ತಾ ನಿಂತಾಗ ಇಷ್ಟೊಂದು
ಕಷ್ಟ ಬೇಡವೆಂದು ಮುಂದೆ ನಿಂತು
ನೋಡು ನಾನು ನಿನ್ನ ಕಣ್ಣಲ್ಲೇ ಇರುವೆನೆಂದು ನೆನಪಿಸುವಳು ನನ್ನವಳು
ಅವಳು ನನ್ನವಳು............
- ಚುಕ್ಕಿ
13 May 2017, 02:28 pm
Download App from Playstore: