ಪ್ರೀತಿಯಿಂದ!!

ನಿನ್ನ ಪ್ರೀತಿಯೇ ನನ್ನ ಜೀವಕ್ಕೆ ಅಕ್ಷಯ ಪಾತ್ರೆ
ಸವಿಯಾದ ಪ್ರೀತಿಯ ಬಾಡೂಟ ಬಡಿಸಿದವನು!!
ಸಂತೋಷದ ಹೆಸರಲ್ಲಿ ನನ್ನ ಹೃದಯ
ಸೇರಿದ ಗೆಳಯ ನೀನು ಸುಗುಣದ
ಸೊಬಗಲ್ಲಿ ಸರಳವಾಗಿ ಬೆರೆತವನು!!

ನೋಡುತ್ತಾ ನೋಡುತ್ತಾ ನನ್ನ
ಹೃದಯ ಕದ್ದವನು!!
ಕಣ್ಣಂಚಿನಲ್ಲೇ ನನ್ನ ಕಟ್ಟಿಹಾಕಿದವನು!!

ಸೊಗಸಾದ ನಗುವಚೆಲ್ಲಿ
ಮುದ್ದಾದ ಮುಖದಲ್ಲಿ
ಮನೋಹರ ಚೆಲುವನ್ನು ಹೊಂದಿರುವವನು!!

ನಿನ್ನ ಪ್ರೀತಿಯೇoಬ ಕಡಲಲ್ಲಿ
ಅಮೂಲ್ಯವಾದ ಮುತ್ತುಗಳನ್ನು
ಬಚ್ಚಿಡು ಬಂಗಾರ ನಾ ಬರುವವರೆಗೆ
ಬೆಲೆಕಟ್ಟಿ ಕೊಂಡುಕೊಳ್ಳುವೆ ನನ್ನ ಪ್ರೀತಿ ಎಂಬ ಅಸ್ತಿಯಿಂದಾ!!

- ಚುಕ್ಕಿ

13 May 2017, 02:52 pm
Download App from Playstore: