ಅಮ್ಮ(ಮದರ್ಸ್ ಡೇ ಗಾಗಿ)
ಹಸಿವಿದ್ದರು, ಹಸಿವ ನೀಗಿಸಿದವಳು ನೀ
ಜಗ ಜರಿದರು, ಒಲವ ತೋರಿದವಳು ನೀ
ಕಾಡಿಸಿದರು, ನೋಯಿಸಿದರು ಕರುಣೆಯೇ ನೀ
ಭರವಸೆಯ ಬಟ್ಟಲು,ಸಾದನೆಯ ಮೆಟ್ಟಿಲು
ಮಮತೆಯ ತೊಟ್ಟಿಲು,ನಿನ್ನ ನಾ ಮುಟ್ಟಲು
ಅನುರಾಗ,ಅಭಿಮಾನ,ಆನಂದವೇ ನೀ
ಕಾಣದ ದೇವರ ಕಾಣಲು ಬಯಸಿದೆ
ಕಣ್ಣಿಗೆ ಕಾಣುವ ದೇವರ ಮರೆತೆ
ಆಸರೆ,ಆಕಾಂಕ್ಷೆ,ಅನುಗ್ರಹವೇ ನೀ
- ವೆಂಕಟೇಶ್ ದೈಶಿ ವೇಮಗಲ್
14 May 2017, 10:01 am
Download App from Playstore: