ಮನವೆಂಬ ಮಾಯೆ...!

ಮನವೇ ತನುವನಾಳುವ ಧನಿಕ
ಮೀರಿದ್ದೇಯಾದರೆ ಬಾಳು ಕ್ಷಣಿಕ
ದೇವನೊಲುಮೆಯ ಕಲ್ಪನೆ ಚಿತ್ರ
ಮನದ ಚಿತ್ತದಿ ನಲ್ಮೆಯ ಗಾತ್ರ

ಉರಗದ ಹುತ್ತದಿ ಕಾಣುವೆಯಾದರೆ
ದರ್ಪದ ಅಹಂ ವಿಷದ ಆಸರೆ
ಕೋರಿಕೆ ವಿನಃ ಅತಿಯ ದಾಹ
ಬಿಟ್ಟರು ಬಿಡದೀ ಮತಿಯ ಮೋಹ

ಮನವೇ ಸ್ವತಃ ವಾನರನ ಸಮ
ಕೇಂದ್ರೀಕೃತ ಸ್ಥಿರವಿಲ್ಲದ ಮರ್ಮ
ನಾನಾ ವಿಧದ ಸ್ವಪ್ನ ಸಂಗತಿ
ಅವಸರ ವಿಘ್ನ ಅಸುರ ಸಂಗಾತಿ

ಕಾಣದ ಕಡಲಿಗೆ ಕರೆಯುವ ಮನವೇ
ಶಾಂತಿಯಿದ್ದರೂ ಕೆದಕುತಲಿರುವೆ
ಕಾಂತಿಯ ತರಹದಿ ಬೆಳಗುವ ಮನವೇ
ಮಣ್ಣಿನ ಮಡಿಲಿಗೆ ಬೆರೆಸಲು ತರವೆ...?
- ದೇವ ನಾಯಕ

- Dev

14 May 2017, 10:02 am
Download App from Playstore: