ಅವ್ವ......
ಬರೆಯಲೇನು ಒಂದು ಹಾಡು
ಹಾಡಲಿ ಹೇಳಲಾಗುವುದೆ ಅವಳ ಪಾಡು
ಕಂದನ ಹೊತ್ತ ನೋವಲ್ಲು ಖುಷಿಯ ಕಂಡು
ಕೂಸು ಒದ್ದರು ನಗುವ ಚೆಲ್ಲಿದಳು ಹರುಷವ ಉಂಡು
ಬರೆಯಲು ಹಾಡು, ಹುಡುಕುತ್ತಿರುವೆ ಪದವ
ಅವಳ ವರ್ಣಿಸಲು ಪದಗಳಲಿ ಸಾಧ್ಯವ
ಆ ತ್ರಿಮೂರ್ತಿಗಳಿಗೂ ನಿಜ ಅರ್ಥದಲಿ ಇವಳೆ ದೈವ
ಅವಳೆ ಬಾಳ ಬೆಳಗುವ ಈ ಅವ್ವ
ಹೊರಬಲ್ಲಳು ನೋವಿನ ಭಾರವ ನವಮಾಸ
ನೋವಲ್ಲಿಯು ನಕ್ಕು ಸಾಕಬಲ್ಲಳ ತನ್ನೊಡಲ ಕೂಸ
ಅದಕ್ಕಿಂತಲು ಅವಳು ಬಯಸಳು ಇನ್ಯಾರ ಸಹವಾಸ
ನೋಡಲಾರಳು ಕಂದನ ನೋವ ತಾನಿದ್ದರು ಉಪವಾಸ
ಅವಳಲ್ಲದೆ ಇನ್ಯಾರಿಗೆ ಬರಬೇಕು ಕೂಸಿಗೆ ತುಂಬಲು ಹರುಷ
ಸಾಕುವಳು ಮಗುವ ಸೊಂಟದಲ್ಲಿಟ್ಟು ಹತ್ತಾರು ವರುಷ
ನೋಯಿಸಿದರು ಬೇಡುವಳು ತನ್ನೊಡಲ ಕೂಸು ನಗುತಿರಲಿ ನೂರಾರು ವರುಷ
ಅವಳಿಲ್ಲದೆ ಜಗವಿರಲು ಸಾಧ್ಯವೆ ಯೋಚಿಸಿ ಒಂದು ನಿಮಿಷ
ಕೂಡಿ ಇಡುವ ಹರುಷ, ನೋಡುತ ಇರಲೆಂದು ಅವಳ ನಯನ
ನಗುತ ಬದುಕ ಕಳೆದರೆ ಸಾಕಲ್ಲವೆ ಅವಳು ಮಾಡುತ ಆ ಕ್ಷಣಗಳ ಮನನ
ಅವಳ ನಗುವ ಕಂಡಾಗಲೆ ಸಾರ್ಥಕ ನಮ್ಮೀ ಜನನ
ಅವಳೆ ಎಂದೂ ಊಹೆಗೂ ನಿಲುಕದ ಸುಂದರ ಕವನ
ಅವಳ ಚರಣಗಳಿಗೆ ನನ್ನ ಕೋಟಿ ನಮನ
- ಶ್ರೀಕಾವ್ಯ
14 May 2017, 04:07 pm
Download App from Playstore: