ನೀನ್ನಿಲ್ಲದೆ ಈ ಜೀವ ಬಾಳದು..
ಮಲ್ಲಿಗೆ ಹೂವ ತೊಂಗಲಲ್ಲಿ
ಅಡಗಿ ಕುಳಿತೆ ಭೃಂಗವಲ್ಲಿ
ಮಲ್ಲಿಗೆಗೆ ನಿನ್ನ ಗಂಧವೊ
ನಿನ್ನಲ್ಲಿ ಮಲ್ಲಿಕಾ ಘಮವೊ...
ಸಂಜೆಗೆಂಪು ಕಡಲತೀರ
ಮೂಡಲು ನಿನ್ನ ಪಾದಚಿತ್ರ
ಪಾದ ರಂಗು ಉಸುಕಿಗೊ
ನಿನ್ನಲ್ಲಿ ಮರಳು ಬಣ್ಣವೊ
ಹರಡಲು ನಿನ್ನ ಕೇಶರಾಶಿ
ಉಂಗುರದ ಮುಂಗುರುಳು ತೋರಿ
ಹೆರಳ ತಾಕಿ ಇರುಳ್ಗಪ್ಪೊ
ನಿಶೆಯ ಛಾಯೆಗೆ, ಕುರುಳ್ಗಪ್ಪೊ
ಭಾವಗಳ ಘರ್ಷಣೆ ನಿಲ್ಲದು
ಹೊಲಿಕೆಗೆ ಪದ ಸಾಲದು
ನೀನ್ನಿಲ್ಲದೆ ಈ ಜೀವ ಬಾಳದು...
- Indushekar Chinivar
16 May 2017, 08:37 am
Download App from Playstore: