ಹುಸಿನುಡಿಯ ಸ್ವರವು

ಅದೇಕೋ ಸುಮ್ಮನೆ ಒಳಗೊಳಗೆ ನೋಯುತ್ತೇನೆ,
ಆದರೂ ಒಂದಾಗಲಿಲ್ಲವೆಂಬ ಬೇಸರವೇನಿಲ್ಲ,
ಅಂದುಕೊಂಡಿದ್ದೆ ಪ್ರೀತಿಯೊಂದು
ಹಾವು ಏಣಿಯಾಟ!!
ಬಟಾಬಯಲಾಯ್ತು ಅತಿಹೆಚ್ಚು ಸೋಲನ್ನೇ ಉಂಡ ಜೂಜಿನಾಟ!!
ಪ್ರೀತಿಯಲ್ಲಿ ಹೊಸೆದ ದಾರದ ಎಳೆಯ
ಶಿಥಿಲತೆಯ ಕಾಣದಾದೆನೇ?
ಇನ್ನೆಲ್ಲಿ ಬೆಳಕು, ನಲುಗಿದ ಹಣತೆಯಲ್ಲೊಂದು
ಮುಳುಗಿದಾ ಬತ್ತಿ.
ಇನ್ನೆಷ್ಟು ಕಾಲ ಸವೆಸಲಿ ಅಂತರಂಗದಾಸೆಯ ಹುದುಗಿಟ್ಟು?
ಮನದ ಗೂಡಿನ ಮುಲೆಯಿಂದ ಹೊರಡುವ ಕಲರವವನು ಕಿವುಚಿಟ್ಟು,
ಕಾಲಸ್ಮರಣೆ ಏನಿತು ಹೊತ್ತು?
ಇನ್ನೇನು ಸಂಧ್ಯಾಕಾಲ,
ರವಿಯು ಕಾಲವಾಗುವ ಕುರುಹು
ಬದಲಾವಣೆಯ ಗಾಳಿ ಬಯಸಿ
ಮತ್ತದೇ ನಾಳೆ, ಅದೇ ಸೆಡವು
ಆದರೂ ನನಗೇನು ಬೇಸರವಿಲ್ಲವೆಂಬ
ಹುಸಿನುಡಿಯ ಸ್ವರವು...!!!!!

-ಕನ್ನಡ ಭಕ್ತ

- ಕನ್ನಡದ ಭಕ್ತ

17 May 2017, 05:10 pm
Download App from Playstore: