ತಾಯಿ ಮಡಿಲ ಸುಖ
ಮೊಲೆ ಹಾಲ ಸಿಹಿ ಉಣಿಸಿ
ಸರಿ-ದಾರಿಯಲ್ಲಿ ನಡೆಸಿ
ಜಗವ ಪರಿಚಯಿಸಿ
ಎಲ್ಲಿ ಹೋದೆ ಕಣ್ಮರೆಯಾಗಿಸಿ.......
ಆರಡಿ ದೇಹಕ್ಕೋ ಇಲ್ಲ
ಆರಿಂಚು ಹೃದಯ ಕ್ಕೊ
ಒಂದಿಂಚ್ಚು ಗಾಯವಾದರು
ಮರುಗಳಿಗೆಯೆ ಬೇಡುವುದು
ಈ ಮನ ,ಆ ಒಡಲ......
ಹಸಿವಾದಾಗ ತಾನಾಗಿಯೆ
ಬಾಯಿ ತೆರೆವಂತೆ
ದುಃಖ ವಾದಾಗ ತಂತಾನೆ
ಕಂಬನಿ ಸುರಿವಂತೆ
ಮಾತೆಯ ಮಮತೆಯು
ಕಂದನಿಗೆ ಸ್ವಂತ ವಂತೆ.....
ಮುಕ್ಕೊಟಿ ದೇವರುಗಳು
ಮಾತೆಯ ಮಡಿಲಲ್ಲಿ ಮಕ್ಕಳು
ಮೂರು ಲೋಕ ಸುತ್ತಿದರು
ತಾಯ ಮಡಿಲ ಸುಖ ಪಡೆಯರು.....
ನೂರು- ನೋವ ಮರೆಸುವಂತ
ಮಾಯಾವತಿ ತಾಯಿ!
ತನ್ನ ನೋವಲ್ಲು ,ಕಂದನ ಹರಸುವಂತ
ಕರುಣಾಮಯಿ ತಾಯಿ!
ಕರುಳಿನ ಕುಡಿಯ ಕಾಯುವಳು
ಉಸಿರಾಗಿ ಕಡೆತನಕ!
ಶಾರಧ
- ಶಕುಂತಲಾ
17 May 2017, 10:00 pm
Download App from Playstore: