ಕತ್ತಲೆಯ ಬೆಳಕು
ಕತ್ತಲೆಯ ರಾತ್ರಿಯಲ್ಲಿ
ಒಂಟಿ ದೀಪವ ಹಿಡಿದು
ಮುದ್ದಿಸಲೇ ನಾ ನಿನ್ನ
ಬದುಕಿನ ಬೆಳಕೇ!!
ಅಂಧಕಾರವ ಅಳಿಸಿ
ಇರುಳನು ನೀ ಮರೆಸಿ
ಬೆಳಕ ತಂದೆಯಾ ನೀ
ಈ ಬಾಳ ಬನಕೆ!!
ಕತ್ತಲಿನ ಬಸಿರಿಂದ
ಜನಿಸಿದ ಕೂಸಂತೆ
ಸರಿಸಬಂದೆಯಾ ನೀ
ಈ ಬಾಳ ಇರುಳ!!
ನಕ್ಷತ್ರ ಲೋಕದ
ನಗುವೊಂದು ಭೂವಿಯಲ್ಲಿ
ಜನನವಾಯಿತೇ ಇಂದು
ನಿನ್ನ ರೂಪದಲ್ಲಿ!!
- ಪಿ.ಜಿ.ಜ್ಯೋತಿ
18 May 2017, 04:52 pm
Download App from Playstore: