ಆಸೆಗಳ ಕಣ್ಣಲ್ಲೆ ಕೂಡಿಸಿ

ಆಸೆಗಳ ಕಣ್ಣಲ್ಲೆ ಕೂಡಿಸಿ
ಮನಸುಗಳ ಜೊತೆಯಾಗಿ ಸೇರಿಸಿ
ಹಾಡುಲೇನು ಒಂದು ಹಾಡು ನಾನು
ಬರುವೆಯ ಹಾಡಿಗೆ ಜೊತೆಯಾಗಿ ನೀನು

ನನ್ನ ಹಾಡಿಗೆ ಉಸಿರೆ ನೀನು
ನೀನಿಲ್ಲದೆ ಆ ಹಾಡು ಹುಟ್ಟಬಹುದೇನು
ಆ ಹಾಡಿಗಾಗೆ ಜೀವ ಹಿಡಿದು ಕಾದಿರುವೆನು
ಈ ಪ್ರೀತಿಯ ಹಾಡಿಗೆ ಉಸಿರಾಗುವೆಯೇನು




ಆ ಹಾಡು ಕೇವಲ ಹಾಡು ಅಷ್ಟೆಯೇನು
ಅದು ನಿನ್ನೊಲವು ತುಂಬಿದ ಸಿಹಿ ಬಟ್ಟಲ ಜೇನು
ಆ ಸವಿಯ ಸವಿಯದೆ ಇರಬಲ್ಲೆನೆ ನಾನು
ಆ ಹಾಡಿನ ಉಸಿರಾಗಲು ಕಾಯುತಿರುವೆನು

ನೀನೆನೆ‌ ನನ್ನೊಲವಿನ ಪ್ರೀತಿಯ ಹೆಜ್ಜೇನು
ಇನ್ನೂ ಹೆಚ್ಚೇನು ನಿನಗೆ ಹೇಳಲಾರೆ ನಾನು
ನನ್ನ ಪ್ರೀತಿಯ ಮಕರಂದ ನಿನಗಾಗೆ ಎಂದು
ನೀ ಬಂದು ಸೇರುವೆಯ ಈಗಲೆ ನನ್ನ ಇಂದು

- ಶ್ರೀಕಾವ್ಯ

18 May 2017, 10:32 pm
Download App from Playstore: