ನಿನ್ನ ಬಿಟ್ಟು ನೀ ಬಾ.

ನಿನ್ನ ನೀ ಪರಿದಿಯೊಳು ಸಿಕ್ಕಿಸದೆ ಬಾ
ರೇಷ್ಮೆಯಂತೆಒಳಗೆ ನುಗ್ಗುನುರಿಯಗದೆ ಬಾ
ಹಾರಡಲು ಬಿಟ್ಟು ಮನವನ್ನು ಸ್ವಚಂದವಾಗಿ
ಜಗಕಂಟಿದ ಬಂಧನ, ನಂಟುಗಳಾಚೆ
ಬಾ ಹೊರಗೆ ಚಿಂತನ ಮಂತನಗಳ ಸೆಲೆಗೆಬಾ

ನಿನ್ನ ನೀ ಒರೆಗಲ್ಲಿಗೆ ಹಚ್ಚಿ
ಪುಟಿಪುಟಿಯುವ ಬಾವಗಳಿಗೆಜೀವ ತುಂಬಿ
ಜಗವ ಮುಷ್ಟಿಯಲ್ಲಿ ಉಜ್ಜುಗೊರಡಿಗೆ ತಿಕ್ಕಿ
ತೂಗಿ,ಜ್ಞಾನದಸಾರ ಚೆಲ್ಲಲು ಬಾ
ಬಾ,ಬಾಯಾರದ ಸಾಹಿತ್ಯ ಚಿಲುಮೆಗೆ ಬಾ

ಸಣ್ಣತೊರೆಯಾಗಿ ಹರಿದುಹರಿಯಲು ಬಾ
ಬಾವನಲೋಕದೀ ತೇಲುತ್ತಾತೇಲಲು ಬಾ
ಸಮುದ್ರದಾಳಕೆ ಜಿಗಿದು ಈಜಿಈಜಿ
ರತ್ನ ಕವನಗಳ ಹೆಕ್ಕಿತೆಗೆಯಲು ನೀ ಬಾ
ಕನ್ನಡ ಕವನ ಲೋಕಕೆ ನನ್ನೊಟ್ಟಿಗೆ ಬಾ

ಬಣ್ಣ ಬಣ್ಣದ ಲೋಕಗಳಾಚೆ
ಸುಂದರ ಸುಮಧುರ ಕನಸುಗಳಾಚೆ
ಕನ್ನಡ ಕಡಲಲಿ ಅರಳಿದ
ಕವನದ ಮಕರಂದ ಹೀರಲು ಬಾ
ಸವಿ ಜೇನು ಸವಿಯಲು ಬಾ
ನನ್ನೊಟ್ಟಿಗೆ ಬಾ ನಿನ್ನ ನೀ ಬಿಟ್ಟು ಬಾ!!

-ಅನಿಲ್ ಕುಮಾರ್.ಜಿ.

- ಅನಿಲಕುಮಾರ್.ಜಿ.

19 May 2017, 01:31 pm
Download App from Playstore: