ಈ ಕ್ಷಣ ನಿನ್ನದು..

ನಗುವ ನಯನಗಳ
ಮೌನ ಮಾತು
ಕಾಡುವ ಕಾಡಿಗೆಯ ಮೆರಗು

ಪಿಳಿ ಪಿಳಿ ಆಡುವ
ರೆಪ್ಪೆ ಪಕಳೆಗಳ ನಾಟ್ಯ
ಅಣಕಿಸುವ ಮುದ್ದು ತುಟಿಗಳ
ಅಂಚಲಿ ತುಂಟ ನಗು

ಕೆಂಪೇರಿದ ಮೃದು ಕೆನ್ನೆಯ
ತಾಕಿ ನಲಿವ ಮುಂಗುರುಳು

ಸಂತಸವೇ ನೀನಾಗಿರುವ
ಈ ಕ್ಷಣ ನಿನ್ನದು ಗೆಳತಿ...

- Indushekar Chinivar

19 May 2017, 06:08 pm
Download App from Playstore: