ಪರಾಶಿವ

ಹುಟ್ಟಿಲ್ಲ ಸಾವಿಲ್ಲ ನಿನಗೆ
ಹೆಸರಿಲ್ಲ ಉಸಿರಿಲ್ಲ ನಿನಗೆ
ಸರ್ವೇಶ್ವರನಾದರು
ಆದಿಭಿಕ್ಷು ನೀನು..........

ನಿನ್ನ ಆಜ್ಞೆ ಇಲ್ಲದೆ ಇರುವೆಯು
ತನ್ನಲ್ಲಿ ಚಲನವಲನ ನಡೆಸಲ್ಲಾ
ನರನಾಡಿಯಲ್ಲಿನ ರುದಿರವು
ನಿನ್ನ ಕೇಳದೆ ಸಾಗಲ್ಲಾ........

ಬದುಕಿದ್ದಾಗ ಪಾಪಗಳಿಂದ
ತುಂಬಿದ ದೇಹಕ್ಕೆ ವಿಮುಕ್ತಿ
ನೀಡಲು ಜನರ ಪ್ರಾಣ
ಹರಿಸುವೆ................

ಅವರ ಆತ್ಮಕ್ಕೆ ಶಾಂತಿನಿಡಲು
ಸುಟ್ಟ ಚಿತಾಭಸ್ಮವ ವಿಭೂತಿ
ಎಂದೇ ನಿನ್ನ ಮೈ ಮೇಲೆ
ಧರಿಸುವೆ................

ಅರ್ಧನಾರೀಶ್ವರನಾಗಿ ಪಾರ್ವತಿಯ
ಪ್ರೀತಿಗೆ ಬೆಳೆಕಟ್ಟಲಾಗದ ಕೊಡುಗೆ
ಕೊಟ್ಟೆ ಪರಮೇಶ್ವರನಾಗಿ

ಪರಾಶಿವನಾಗಿ..............

- ಚುಕ್ಕಿ

19 May 2017, 06:54 pm
Download App from Playstore: