ಕವಿ ಅಲ್ಲ ನಾನು

ಕವಿ ಅಲ್ಲ ನಾನು
ಆದರು ಬರೆಯುವೆನು
ಪದಪುಂಜಗಳ ಕಡಲ ಈಜಲಾರೆನು
ಆದರು ನಿಂತಿಲ್ಲ ಬರೆಯುವ ವ್ಯಾಮೋಹವಿನ್ನು

ಮನಸೊಳಗೆ‌ ಪದಗಳದೆ ಗೊಣಗಾಟ
ಮಾತಿಗೆ ನಿಲುಕದ ಪರದಾಟ
ಬರೆಯಬೇಕೆಂಬ ಆಸೆ ಆಡುವುದು ಬಯಲಾಟ
ಬರೆಯಲಾರದೆ ಅನುಭವಿಸಲಾರೆನು ಈ ತೊಳಲಾಟ

ಮನಸಿನಲಿ‌ ಕಟ್ಟುತ್ತಿರುವೆ ‌ಪದಗಳ ಹೂದೋಟ
ಒಂದೊಂದು ಹೂವ ಹೆಕ್ಕಿ ಭಾವಗಳ ಸೇರಿಸಿ ಸಾಲುಗಳ ಕಟ್ಟುವುದೆ ಆಟ
ನಿಲ್ಲದು ಸುಂದರ ಸಾಲುಗಳ ಮಾಲೆಯ ಕಟ್ಟಬೇಕೆಂಬ ಚಟ
ಎಂದಿಗೂ ನಿಲ್ಲದಿರಲೆಂದು ಬಯಸುವೆ ಈ ಚಟದ ಆರ್ಭಟ

ಸಹಸ್ರ ಸುಂದರ ಪದಗಳ ಹೆಕ್ಕುವುದ ಅರಿಯೆನು
ಆದರೂ ತಿಳಿದಷ್ಟು ಪದಗಳ‌ ಪೋಣಿಸಿ ಭಾವ ಸೇರಿಸುವೆನು
ನಾ ಬರೆಯುವ ಸಾಲುಗಳ ಸೊಗಸನ್ನು ನಾನು‌‌‌‌ ತಿಳಿಯೆನು
ಬರೆಯುವಾಗಲೆಲ್ಲ ಮನಕೆ ಕಂಪು ಸೂಸಿ ಖುಷಿ ಮೂಡಲೆಂದೆ ಬರೆಯುವೆನು
ತಪ್ಪಿದ್ದರೆ ಮನ್ನಿಸಿ‌ ತಿದ್ದಿ ಎನ್ನನು

ಕವಿ ಅಲ್ಲ ನಾನು
ಆದರೂ ಬರೆಯುವೆನು.....

- ಶ್ರೀಕಾವ್ಯ

20 May 2017, 12:54 pm
Download App from Playstore: