ಒಮ್ಮೊಮ್ಮೆ ಹೀಗೂನು ಇರುವೆನು
ಒಮ್ಮೊಮ್ಮೆ ಹೀಗೂನು ಇರುವೆನು
ಎತ್ತಲೊ ಸಾಗುವ ದಾರಿಯನೆ ನೋಡುತ ಕೂರುವೆನು
ನಾ ಹೋಗಬೇಕಿರುವ ದಾರಿಯನೆ ಮರೆಯುವೆನು
ಕಾಣದವರೊಮ್ಮೆ ಎದುರು ಬಂದಾಗ ಅರಿವಿಲ್ಲದೆ ನೋಡುತ್ತಿರುವೆನು
ಕಂಡವರು ಒಮ್ಮೆ ನೆಪ್ಪಿಡಿದು ಮಾತಿಗಿಳಿದರು ಮೌನಿಯಾಗುವೆನು
ಕಾರಿರುಳ ರಾತ್ರಿಯ ಪ್ರೀತಿಯಿಂದ ಅಪ್ಪಿ ಕೂರುವೆನು
ಅದೆ ರಾತ್ರಿಯನು ಶಪಿಸಿ ನೋಯುವೆನು
ನನ್ನೆದುರು ಇದ್ದುರು ನೋಡುತ್ತಿದ್ದರು ಅರಿವಿಗೆ ಬಾರದಂತೆ ಸ್ಮೃತಿಪಟಲ ಮುಚ್ಚಿರುವೆನು
ಇನ್ಯಾವುದೊ ಅರಿಯದ ಸಂಗತಿಯ ಮನಸೊಳಗಿಟ್ಟು ಅದರದೆ ಗೊಣಗಾಟದಲಿ ಸಾಗುವೆನು
ಮನಸೊಳಗೆ ಏನೇನೊ ಬಡಬಡಿಸುವೆನು
ಆದರು ಏನನು ಹೇಳದೆ ಏಕಾಂಗಿಯಾಗುವೆನು
ಸಾವಿರ ನೋವಿದ್ದರು ನಗುತ್ತ ಇರುವೆನು
ಕೆಲವೊಮ್ಮೆ ಖುಷಿಯ ಕಂಡಾಗಲು ಕಣ್ಣೀರು ಹಾಕುವೆನು
ನೋಟವ ಎಲ್ಲೊ ನೆಟ್ಟು ಅದರ ಅರಿವಿರದಂತೆ ಇನ್ನೇನೊ ಯೋಚಿಸುವೆನು
ಕೆಲವೊಮ್ಮೆ ಊಹೆಗು ನಿಲುಕದ್ದ ಮನಸಲೆ ನೋಡುತ ಕಳೆದೋಗುವೆನು
ಕೆಲವೊಮ್ಮೆ ಕೊನೆಯ ಕಾಣದ ಮುಗಿಲಿನಂತೆ ಹರಟುವೆನು
ಮಗದೊಮ್ಮೆ ಮಾತೆಬಾರದೆಂಬಂತೆ ಮೂಕಿಯಾಗುವೆನು
ಹಾಗೊಮ್ಮೆ ಹೀಗೆ, ಹೀಗೊಮ್ಮೆ ಹಾಗೆ
ನಾ ಈ ರೀತಿಯು ಇರುವೆನು
- ಶ್ರೀಕಾವ್ಯ
21 May 2017, 12:16 pm
Download App from Playstore: