ಕಂಡೆ, ಕ್ಷಣಕೆ ಮರೆಯಾದೆ..
ಅಲೆಯ ಮೇಲಿನ ಗುಳ್ಳೆಯಂತೆ
ಕಂಡೆ, ಕ್ಷಣಕೆ ಮರೆಯಾದೆ...
ಸುಳಿವ ಕೋಮಲ ಕನಸಿನಲಿ
ಅದ್ದಿ ತೆಗೆಯುವೆ ನಿನ್ನ ರೂಪವ
ಮೂಡಿಸುವೆ ಆಗಸದಲಿ
ನಿನ್ನ ಮೋಹಕ ಚಿತ್ರವ
ತೇಲುವ ಮುಗಿಲಲಿ
ಹುಡುಕುವೆ ನಿನ್ನ ಮೈ ಮಾಟವ
ಅರಳುವ ಹೂವಲಿ
ಅರಸುವೆ ನಿನ್ನ ಗಂಧವ
ಹಗಲಿರುಳು ಅಲೆವ ಮನಕೆ
ನಿನ್ನ ನೆನಪು ಆಸರೆ
ಇಂದಲ್ಲ ನಾಳೆ ನೀ
ಸಿಗುವೆಯೆಂಬ ಭರವಸೆ...
- Indushekar Chinivar
21 May 2017, 07:33 pm
Download App from Playstore: