ನನ್ನ ನಗು
ಹುಡುಕಿ ನೋಡಿದೆ ನನ್ನ ನಗುವನ್ನು
ನನ್ನ ತುಟಿಯಲ್ಲಿ ಕಾಣಲಿಲ್ಲ..........
ಕಾಯುತ್ತಿದ್ದೆ ಬರಬಹುದೇನೋ ಅಂತ
ನನ್ನ ಕನಸಲ್ಲಿ ಬರಲಿಲ್ಲ.............
ಬಿಡದೆ ನೋಡುತ್ತಿದ್ದೆ ಅದು
ಕಾಣಬಹುದೇನೋ ಎಂದು ನನ್ನ
ನೆರಳಲ್ಲಿ ಕಂಡಿಲ್ಲ....................
ಕನ್ನಡಿಯ ಮುಂದೆ ನಿಂತು ನೋಡಿದೆ
ಅಡಗಿದಿಯೇನೋ ಎಂದು ಕನ್ನಡಿಯ
ಮರೆಯಲ್ಲಿ ಸಿಗಲಿಲ್ಲ................
ನಾನೆಂತ ದಡ್ಡಿ ಊರೆಲ್ಲಾ ಹುಡುಕುತ್ತಿದ್ದೆ
ಕಳೆದೊದ ನಗುವಿಗಾಗಿ ಮರೆತೇ ಹೋಗಿದ್ದೆ.................
ನಾನು ಅದನ್ನು ಬಚ್ಚಿಟ್ಟಿದ್ದು ಅಮ್ಮನ ಮನಸಲ್ಲಿ
ಅವರು ನನಗಾಗಿ ಮಾಡುವ ಮಾಡುವ ಪ್ರತಿ ಕೆಲಸದಲ್ಲಿ................
ಅವರ ನಗು ಮುಖದಲ್ಲಿ..................
- ಚುಕ್ಕಿ
21 May 2017, 08:16 pm
Download App from Playstore: