ಶ್ರಮಜೀವಿಗಳು ನಾವು
ಲೆಕ್ಕವಿಲ್ಲದ ಅದೆಷ್ಟೋ ಹಗರಣಗಳು
ತೂಕಡಿಸುತ್ತ,ಸಾಗುತಿರುವ ತನಿಕೆಗಳು
ದಲಿತರ ಉದ್ದಾರದ ಮಂತ್ರ
ಅವರ ಮನೆಯಲ್ಲಿ
ಉಣ್ಣುವುದರಲ್ಲಿ ಮಾತ್ರ
ತನಿಕೆಯ ನೆಪದಲ್ಲಿ
ಬಡವರ ಸಂಹಾರ
ಅದೆ,ತನಿಕೆಯ ಮರೆಯಲ್ಲಿ
ಸಿರಿವಂತರ ಉದ್ದಾರ
ಇದೆ,ನಮ್ಮನಾಳುವವರ ಉದ್ಗಾರ
ಸಮಾಜವೆಂಬ ಸುಂದರ
ಹೂ-ದೋಟವು
ಹಗರಣಗಳೆಂಬ ಕೀಟಗಳ
ಹಾವಳಿಯಿಂದ ಸೊರಗಿಹವು
ತನಿಕೆಯೆಂಬ ಔಷಧಿ ಸಿಂಪರಣಿಕೆಯು
ಸಾಗಿದೆ ಆಮೆ- ಗತಿಯಲ್ಲಿ
ಸಾವಿರಾರು- ಸಮಸ್ಯೆಗಳು
ನೂರಾರು- ಹೋರಾಟಗಳು
ಹತ್ತಾರು- ಸಲಹೆಗಳು
ಆರ್ಥಿಕತೆಯ ಬೆನ್ನೆಲುಬು ನಾವು
ಅಭಿವೃದ್ಧಿಯ ನೆಪದಲ್ಲಿ ಮಣ್ಣಾದೆವು
ಹರಿಯುವುದು ಆಶ್ವಾಸನೆಯ
ಮಹಾಪೂರ
ಅರಿಯುವವರಿಲ್ಲ ನಮ್ಮೆದೆಯ
ದುಃಖದ ಸಾಗರ
ಬಿತ್ತಿ- ಬೆಳೆವವರು ನಾವು
ಕೂತು- ಉಣ್ಣುವವರು ನೀವು
ನಿಮ್ಮ ಒಪ್ಪಿಗೆ
ನಾವು ತಿನ್ನುವ ತುತ್ತಿಗೆ ....,,,,,,,,?
ದಿನವಿಡೀ ಶ್ರಮವಹಿಸಿ ದುಡಿವೆವು
ದೇಹವ ದಂಡಿಸಿ- ಕಬ್ಬಿಣವ ಬಗ್ಗಿಸಿ
ಬಂಡೆಗಳ ಬಡಿದು- ಬೆವರ ಸುರಿಸಿ
ವೈಭವದ ಮಹಡಿಯ ನಿರ್ಮಿಸಿವೆವು
ಬೇಸತ್ತು ಹೋಗಿದೆ ಮನ
ಆಶ್ವಾಸನೆ,ಪರಿಶೀಲನೆ, ಯೋಜನೆ ?
ಜಡತ್ವವ ಬಿಡಿ ,ನ್ಯಾಯವ ನೀಡಿ.
ಶಾರಧ
- ಶಕುಂತಲಾ
22 May 2017, 12:44 pm
Download App from Playstore: