ರಾಧೇ.........
ಲಾವಣ್ಯ ಕರಗತ ಮೊಗವ ನೋಡಿ
ನಾಚಿದಲಾ ರಾಧೆ
ಕೃಷ್ಣನು ಕೈ ಹಿಡಿದಾಗ.....
ಕಾಲ್ಗೆಜ್ಜೆ ಜಾರಿ ಬಿತ್ತು ಸಿರಿವನದ
ನೆಲದಲ್ಲಿ ರಾಧೆ ಓಡಿದ ಕ್ಷಣದಲ್ಲಿ......
ಕೈಗೆತ್ತಿ ಮುತ್ತಿಟ್ಟು ಹೃದಯದಲ್ಲಿ ಬಚ್ಚಿಟ್ಟನು ಆ ಗೆಜ್ಜೆಯ ತನ್ನದೆಂದು.......
ತನ್ನದು ಅದು ಕೊಡು ಎಂದು ರಾಧೆ ಕೇಳಿದಾಗ ನೀನೇ ನನ್ನವಳು ಆ ಗೆಜ್ಜೆ ನಿನಗೇಕೆ ಪ್ರೀಯತಮೇ ಎಂದನಾ ತುಂಟ ಕೃಷ್ಣನು......
ಮಾತಿನ ಮಧುರ್ಯತೆಗೆ ಮರುಳಾದ ಆ ರಾಧೆ ನಕ್ಕು ಹೊಡಿ ಬಂದಳು ಶ್ರೀಲೊಳನ ಎದೆಯಲ್ಲಿ ನೆಲೆಯಾಗಳು.....
ಜಲಧಾರೆಯ ಮಡಿಲಲ್ಲಿ ಉಯ್ಯಾಲೆ ಕಟ್ಟಿ ಅದರಲ್ಲಿ ತೂಗುತ್ತಿದ್ದನು ಶ್ರೀ ಕೃಷ್ಣ ಮುದ್ದಾದ ರಾಧೇಯನ್ನು.....
ಉಲ್ಲಾಸದಿ ಹಾಡುತ್ತಿದ್ದ ರಾಧೆಯ ಸೊಗಸಾದ ಪಾದವ ಪ್ರೀತಿಯಿಂದ ಚುಂಬಿಸುತ್ತಾ ಅಡುತ್ತಿದ್ದನು ಅವಳ ಕೇಶರಾಶಿಯ ಜೊತೆ............
ಆ ರಾಧೆ ಕೆನ್ನೆಯಲ್ಲಿ ಕೆoಪಾದ ಬಣ್ಣವಾಗಲು ನಾಚುತ್ತ ತಲೆಬಾಗಿ ನೋಡಿದನು ಆ ಕೃಷ್ಣ ರಾಧೇಯ ಕಡೆಗೆ ದಿಟ್ಟಿಸಿ.......
ನಗುವ ತುಟಿಯಂಚಿನಲ್ಲಿ ಮಧುವಾಗಿ ಕರಗಳು ಪರಿತಪಿಸಿದನು ಆ ನವನೀತ ಚೋರನು.........
ಎಳೆದು ಆ ರಾಧೆಯ ತನ್ನ ಬದಿಗೆ ಎದೆಬಡಿತ ಕೇಳುತ್ತ ನಿಂತನು ಆ ಎದೆಯು ಜಪಿಸುತ್ತಿರುವ ತನ್ನ ನಾಮವ ಕೇಳಿ ಬೆರಗಾಗಿ ತನ್ಮಯನಾದನು ತನ್ನಲ್ಲಿ ತಾನೇ........
- ಚುಕ್ಕಿ
24 May 2017, 08:07 pm
Download App from Playstore: