ನೆನಪುಗಳು........
ಒಳಿತುಗಳೆಲ್ಲ ನನ್ನವಾಗಿ
ಕೆಡುಕುಗಳೆಲ್ಲ ದೂರವಾಗಿ
ಮಡಿಲಿನ ಕೆಂಡವಾಗಿ
ಜನಿಸಿದೆ ಕೊನೆಯ ಮಗಳಾಗಿ
ಸ್ವಚ್ಛಂದ ಆಗಸದಲ್ಲಿ
ಹಾರಾಡುವ ಆಸೆ
ಪಾತಾಳ ಗಂಗೆಯ ಮುಟ್ಟಿ
ಮುತ್ತಿಟ್ಟು, ನಲಿಯುವ ಆಸೆ
ದೂರ ಸಾಗರವ ತೇಲುತ್ತಾ....
ಸಾಗುತ್ತಾ.... ಹಾಡುವಾಸೆ
ಬಾಲ್ಯದ ತುಂಟಾಟಗಳ
ಸಿಹಿ ನೆನಪುಗಳ ಅಲೆಯಲ್ಲಿ
ಬೆಳೆದೆನು ಒಡನಾಡಿಗಳ
ತಾರತಮ್ಯದ ಬಲೆಯಲ್ಲಿ
ಆ ಶಾರದೆ ನೀಡಲಿಲ್ಲ
ನಾ ಬಯಸಿದಷ್ಟು ಚಾತುರ್ಯ
ಆದರೂ... ಹಿಂಜರಿಯಲಿಲ್ಲ
ಆಯ್ದುಕೊಂಡೆ ಸನ್ಮಾರ್ಗ
ಹಿಮಾಲಯದ ಶಿಖರದಲ್ಲಿದೆ
ನನ್ನಾಸೆಯ ಆ ಗುರಿ
ಪ್ರಯತ್ನ ಸಾಗಬೇಕಿದೆ
ಗುರಿಯ ಅರಸಿ
ಶಾರಧ
- ಶಕುಂತಲಾ
24 May 2017, 08:50 pm
Download App from Playstore: