ಮನಸ ಮಾತನು

ಲಾಲಿಹಾಡಿ ಕೇಳುತ್ತಾ ನೀನು
ಗಾಳಿ ತಂಪಿಗೆ ರೆಪ್ಪೆ ಇಳಿಸಿ
ಮಲಗೋ ಚಿನ್ನ ಮಾತಿಲ್ಲದೇ
ಬೆಚ್ಚಗೆ ನನ್ನ ಅಪ್ಪಿಕೊಂಡು...

ಕನಸಕಾಣಲೆಂದು ನೀನು
ತೊರೆದು ಹೋಗದಿರು ನನ್ನ
ಮರೆತು ಕನಸಲೂ........

ಕರೆದು ನನ್ನ ಮನವನಿಂದು
ಬೆರೆಸಿ ನಿನ್ನ ಉಸಿರ ಸದ್ದು
ಕದ್ದು ಮುಚ್ಚಿ ನೋಡದಿರು
ನನ್ನ ಮನಸ ಮಾತನು.........

- ಚುಕ್ಕಿ

25 May 2017, 12:12 pm
Download App from Playstore: