ಅನಾಥೆಯಾಗಿ......

ಬೆಳಗಿನ ಜಾವ ನಾಲ್ಕು
ನಿದ್ದೆ ಇನ್ನು ನನ್ನ ಕಣ್ಣು ಬಿಟ್ಟು ಹೋಗಿಲ್ಲ
ಕನಸಲ್ಲಿ ಸ್ನೇಹಿತರ ಜೊತೆಗೂಡಿ ಅಡುತಿಯುವೆ....
ಮನೆಯೊಡತಿ ನಮ್ಮ ಅಮ್ಮನಲ್ಲದ ಅಮ್ಮ
ಬಂದಳು ಮಂಚವಿಳಿದು ನನ್ನ ಪ್ರೀತಿಯಿಂದ ಎಬ್ಬಿಸಲೂ........

ಛಡಿಏಟು ಬಿತ್ತಲ್ಲ ಮೈಮೇಲೆ
ನೋವೆಂದು ಅಳುತಿರುವೆ ಕನಸಲ್ಲ ಇದು
ನನ್ನ ಮಾಲೀಕನ ಮನೆ..............
ಒಂದು ರಾಶಿ ಪಾತ್ರೆ ಇದೆ ಇನ್ನೊಂದು ಮೂಟೆ ಬಟ್ಟೆ ಇದೆ ನನ್ನ ನೋವು ಹಂಚಿಕೊಳ್ಳಲು ಅವು ಶುಭ್ರವಾಗುವವರೆಗೂ............

ಮುಗಿತು ಕೆಲಸ ನೋವಿನೊಂದಿಗೆ
ಹೊಟ್ಟೆ ಹಸಿವು ತಾಳಲಾರದೆ ಅಳುತಿರುವೆ ಬೆಳಕರಿದು ಹತ್ತಾದರು........
ಹಾಕಿದಳು ಮನೆ ಅರಸಿ ನೆಣ್ಣೆಯ
ಹಲಸಿದಾನ್ನವ ಕೆಟ್ಟೋದ ಸಾರಿನ ಜೊತೆಗೆ
ದುರ್ವಾಸನೆ ಬಿರುತ್ತಿದೆ ತಿನ್ನಲಾಗುತ್ತಿಲ್ಲ ಆದರೂ ತಪ್ಪುವುದಿಲ್ಲ ಹೊಟ್ಟೆಯಸಿವು ಕಾಡುತ್ತಿದೆಯಲ್ಲ....

ಯಾಕೆ ನನಗೀ ದುಸ್ಥಿತಿ ಯಾರಿಲ್ಲದೆ
ಅನಾಥೇಯ ಪರಿಸ್ಥಿತಿ ಎದುರಾಗಿದೆ
ಹೆತ್ತವರು ಕಡುಪಾಪಿ ಕಟುಕರು ಬಿಟ್ಟೋದರಲ್ಲ ನನ್ನ ಹೆಣ್ಣೆಂಬ ಕಾರಣಕೆ ಕಸದ ರಾಶಿಯಲ್ಲಿ .......

ಒಂದು ತುತ್ತು ಅನ್ನಕ್ಕಾಗಿ ಆಶ್ರಯ ನೀಡಿದ ಮನೆಯ ಹಾಳಾಗಿ
ಸುಗಮವಾಗಿ ಸಾಯೆಂದು ಜೀವನ ಪೂರ್ತಿ
ಅನಾಥೆಯಾಗಿ.........

- ಚುಕ್ಕಿ

26 May 2017, 12:36 pm
Download App from Playstore: