ಇಳೆಯ ಅನುಜಿ

ಎಷ್ಟು ಸುಂದರ ಸೃಷ್ಟಿ
ಪ್ರಕೃತಿ ದೇವತೆಯ ತಿಲಕ
ವಜ್ರಮೋಡದಿಂದುದುರುವ
ಮುತ್ತಿನ ಹನಿಯ ಮಾಲೆ..!!!

ಎಲ್ಲಿ ಒಮ್ಮೆ ಎಲ್ಲರೂ
ಚಪ್ಪಾಳೆ ತಟ್ಟಿ!!
ಮಳೆ ಹನಿಗಳು ಆಯೋಜಿಸಿರುವ
ಮೇಳಕ್ಕೆ..!!

ಭಾನು ಭೂಮಿಯ
ಪ್ರೇಮಾಂಕುರದ ಸಂಕೇತ,
ಚುಂಬಿಸಿ ಚಿಮ್ಮುವ
ಪುಳಕದಲೇನೋ ರೋಮಾಂಚನ..!!

ದಿಟ್ಟಿಸಿ ನೋಡಿರೊಮ್ಮೆ,
ವೃಕ್ಷಕ್ಕೆ ನೆತ್ತರ ನೀಡುವ ಪರಿ,
ಚಿಗುರುಗಳ ಚೈತನ್ಯ ಬಿಂದು,
ರೈತಭಂದು..!!

ಮಳೆ ಹಾಡುವ ಸುಪ್ರಭಾತಕೆ
ಎಲೆಗಳ ನಿದ್ರೆಯು ಹಾರಿ,
ತುದಿಯಲಿ ಹನಿಯ ತೊಟ್ಟುಗಳು ಜಾರಿ,
ಶುರು ಮಾಡುವವು ಆಮ್ಲದ ತಯಾರಿ..!!

-ಕನ್ನಡ ಭಕ್ತ

- ಕನ್ನಡದ ಭಕ್ತ

28 May 2017, 01:11 am
Download App from Playstore: