ಭಗವಂತ

ನನ್ನದೆಂಬ ಆತ್ಮಕೊಟ್ಟ ಭಗವಂತ
ದೇಹ ನನ್ನನ್ನೆತ್ತ ಪರಕಿಯರಿದೆಂದು ತಿಳಿಸಿಬಿಟ್ಟ.
ಸ್ವಾತಂತ್ರ್ಯವಿಲ್ಲದೇ ನನ್ನೊಳಗೆ ನಾ ನೊಂದುಕೊಳ್ಳುವ ಹಣೆ ಬರಹ ಬರೆದಿಟ್ಟ.

ಜ್ಯೋತಿಯ ಕೈಗಿಟ್ಟು ಇತರರ ಜೀವನ
ಬೆಳಗಿಸುವುದನ್ನು ಕಳಿಸಿಕೊಟ್ಟ.
ಅದೇ ಜ್ಯೋತಿಯನ್ನು ನನ್ನ ಜೀವನದವೆಂಬ
ಸಿರಿವನದ ತುದಿಯಲಿಟ್ಟು ಕಾಡ್ಗಿಚ್ಚಾಗಿ ಬಡಳಿಸಿಬಿಟ್ಟ.

ಸದಾ ನಿನ್ನ ನೆರಳಲ್ಲೇ ಇರುವೆನೆಂದು
ಮಾತುಕೊಟ್ಟ ಇರುಳುಬಂದು
ಸೇರುವಷ್ಟರಲ್ಲಿ ನನ್ನ ಮರೆತುಬಿಟ್ಟ.

ಕನಿಷ್ಠ ಕನಸಲ್ಲಾದರು ನಗು ಎಂದು
ವರವಕೊಟ್ಟ ನೋವಿಲ್ಲದೆ ನಗುವಷ್ಟರಲ್ಲಿ
ಬೆಳಕರಿಸಿ ಬಿಟ್ಟ.

- ಚುಕ್ಕಿ

28 May 2017, 06:37 am
Download App from Playstore: