ಜಡಿ ಮಳೆ
ಜಡಿ ಮಳೆ ಧರೆಗಿಳಿದು ಬಂದಿದೆ
ಘಲ್ಲು ಘಲ್ಲೆಂದು ಸದ್ದು ಮಾಡುತ್ತಾ......
ಸುಮಧುರ ಸಂಗೀತವ
ಹೊತ್ತು ತಂದಿದೆ ತನು ಮರೆಸಲು......
ಅನುಕಂಪದ ಮಳೆ ಬಂದಿದೆ
ಭುವಿಗೆ ಬರಗಾಲ ಓಡಿಸಲು .......
ಸೊಗಸಾದ ಮಂದಹಾಸವ ಎಲ್ಲರ
ಮುಖದಲ್ಲಿ ತುಂಬಿ ಹೋಗಳು........
ಬೆಳೆಗಳಿಗೆ ಮಳೆಗಾಗಿ
ಗಗನಕ್ಕೆ ಕೈಚಾಚಿ ಕುಳಿತಿದ್ದ
ರೈತನ ಹೊಟ್ಟೆ ತುಂಬಿಸಲು
ಬಂದಿದೆ ಅವಣಿ ಗೆ ಜಡಿಮಳೆ......
ತಲೆಮೇಲೆ ಸೆರೆಗೊತ್ತು ನೀರಿಗಾಗಿ
ಅಲೆದಾಡಿದ ಹೆಣ್ಣು ಮಗಳ
ಕಷ್ಟ ನೋಡಲಾಗದೆ ಬಂದಿದೆ
ಜಡಿಮಳೆ ಕೆರೆಗಳಿಗೆ ನೀರು ತುಂಬಲು......
ಸೂರ್ಯನ ಶಾಖಕ್ಕೆ ಮೊಡದಲ್ಲಿ
ಅಡಗಿದ್ದ ಜಲವನ್ನು ಪೃಥ್ವಿಯ
ಮಡಿಲು ಸೇರಿಸಲು ಬಂದಿದೆ
ಮುಂಗಾರು ಮಳೆ ನೂತನ ಆಸೆಗಳೊತ್ತು..........
- ಚುಕ್ಕಿ
28 May 2017, 10:13 am
Download App from Playstore: