ನನ್ನ ಮುದ್ದು ರನ್ನ.....
ಹೆಲೊ ಹೆಲೊ ನೀನೆ ನನ್ನ ಮುದ್ದು ರನ್ನ
ಓಡಿ ಬಂದು ಅಪ್ಪಿಕೊ ಬಾರದೆ ಒಮ್ಮೆ ನನ್ನ
ಬಂದಿರುವೆನು ನಾನು ನಿನ್ನ ಹೃದಯಕ್ಕೆ ಹಾಕಲೆಂದು ಕನ್ನ
ತೋರು ಬಾರೆ ನಿನ್ನ ಮನಸಿನ ಮನೆಗೆ ದಾರಿಯನ್ನ
ನೀ ಮಾಡಿರುವೆ ಮನಸನ್ನು ಬಲೂನನ್ನ
ನಾ ತುಂಬಿರುವೆ ಪ್ರೀತಿಯ ಗಾಳಿಯನ್ನ
ಒಪ್ಪಿ ಬಂದು ಹಾರಿ ಬಿಡು ನನ್ನ ಹೃದಯವನ್ನ
ಒಡೆದಾಕ ಬೇಡ ನೀ ಚುಚ್ಚಿ ಗುಂಡುಪಿನ್ನ
ಯಾಕೆ ಇನ್ನು ನಿನ್ನದು ಇಂತ ದಿವ್ಯಮೌನ
ಇರಬಹುದೆ ನಿನಗೆ ನನ್ನ ಮೇಲೆ ಅನುಮಾನ
ನಾನು ತುಂಬಾನೆ ಒಳ್ಳೆ ಹುಡುಗ ಚಿನ್ನ
ಒಮ್ಮೆ ಕೇಳಿ ಬಾ ಊರಲ್ಲಿರೊ ಎಲ್ಲರನ್ನ
ಹಿಂದೆ ಬಿದ್ದಿರುವೆ ವರಿಸಲೆಂದೆ ನಿನ್ನ
ಒಪ್ಪಿಗೆ ಕೇಳಿ ಬರೋಣ ನಿನ್ನ ಅಪ್ಪ ಅಮ್ಮನ್ನ
ಬುಕ್ ಮಾಡಿರುವೆ ಕಲ್ಯಾಣ ಮಂಟಪವನ್ನ
ನಾ ಕಟ್ಟಿ ಬಿಡುವೆ ಈಗಲೆ ತಾಳಿಯನ್ನ
- ಶ್ರೀಕಾವ್ಯ
28 May 2017, 11:28 am
Download App from Playstore: