ಯಾರೇ ನೀ ತುಂಟದಗಿತ್ತಿ

ಯಾರೇ ನೀನು ತುಂಟಲಗಿತ್ತಿ,
ಬಂದೆ ಹಿಂದೆ ಬೆನ್ನ ಹತ್ತಿ…!
ಮಾಡ್ತಿಯ ನೀನು ನನ್ನ ಪ್ರೀತಿ,
ನಾಚುತಾ ಹೇಳ್ತಿದೆ ಮೂಗಿನ ಮೂಗುತಿ…!!

ಸುಮ್ಮನೆ ನೀನು ಯಾಕೆ ನಗುತಿ,
ನನ್ನನೇ ನೋಡುತಾ ಬಳಕುತ ನುಲಿತಿ…!
ಮನಸಿಗೆ ತಳಮಳ ಮಾಡೇ ಬಿಡುತಿ,
ನೀನೇ ಅಲ್ಲವೆ ಭಾವಿ ಒಡತಿ…!!

ದಿನಾಲು ರಾತ್ರಿ ಕನಸಲಿ ಬರುತಿ,
ಸತಾಯಿಸ್ತಿಯಲ್ಲೇ ನನ್ನ ಮುತ್ತಿ ಮುತ್ತಿ…!
ಸಂಜೆ ಹೊತ್ತಲಿ ಒಬ್ಬಳೆ ಸಿಗುತಿ,
ನಿನ್ನ ಸೇರುವಷ್ಟರಲ್ಲೆ ಹೊರಟೇ ಬಿಡುತಿ…!!

ಯಾಕೆ ಇಷ್ಟು ನನ್ನಾ ಕಾಡುತಿ,
ಅಪ್ಪಿಕೊಳ್ಳು ಬಾರೇ ಒಂದು ಸರತಿ…!
ಕೇಳೆ ನನ್ನ ಜೀವದ ಗೆಳತಿ,
ಆಗುವೆಯಾ ನನ್ನ ಬಾಳ ಸಂಗಾತಿ…!!

- Acchu love

28 May 2017, 03:00 pm
Download App from Playstore: