ಸೀತೆ...
ರಾಮ ದಂಡಿಸಿದ ಸೂರ್ಪನಕಿಯ
ಕತ್ತರಿಸಿ ಅವಳ ಮೂಗು ಕಿವಿಯ
ನೆನೆದು ತಾನುಂಡ ನೋವಿನ ಕಹಿಯ
ಬಂದಳು ಸಹೋದರನಲಿ, ಅವನು ಲಂಕೆಗೆ ಒಡೆಯ
ಕಂಡನು ದಶಮುಖ ಒಡಹುಟ್ಟಿದವಳ ಸ್ಥಿತಿಯ
ರಾಮನಿಗೆ ಕಲಿಸುವೆನು ಪಾಠವನೆಂದು ಇತ್ತನು ಭಾಷೆಯ
ಕಳುಹಿಸಿದ ರಾವಣ ಮಾರೀಚನ ಮಾಡಿ ಬಂಗಾರ ಜಿಂಕೆಯ
ಸೋತಳು ಜಾನಕಿ ನೋಡಿ ಮಾಯ ಮರೀಚಿಕೆಯ
ನಡೆದನು ರಾಮ ಜಿಂಕೆ ಹರಸಿ ಸಮಾಧಾನಿಸಲು ಮನದರಸಿಯ
ಕೊಟ್ಟು ಲಕ್ಷ್ಮಣನಿಗೆ ಅವಳ ಕಾಯುವ ಹೊಣೆಯ
ಕೊಲ್ಲಲು ರಾಮ ಜಿಂಕೆಯ, ಮಾರೀಚ ಕೂಗಿರಲು ರಾಮನಂತೆ ಲಕ್ಷ್ಮಣ ಸೀತೆಯ
ಜಾನಕಿ ಕಳುಹಿಸಿದಳು ಲಕ್ಷ್ಮಣನ ನೋಡಿ ಬರಲೆಂದು ಅಣ್ಣನ ಇತ್ತು ಆಜ್ಞೆಯ
ಹೊರಟನು ರಾಮನ ಅನುಜ ಎಳೆದು ಲಕ್ಷ್ಮಣ ರೇಖೆಯ
ಇತ್ತ ಕಂಡಳು ಜಾನಕಿ ಸನ್ಯಾಸಿಯ
ದಾಟಿದಳು ರೇಖೆಯ ಕೊಡಲು ಭಿಕ್ಷೆಯ ಅರಿಯದೆ ಸನ್ಯಾಸಿ ಅಲಂಕೃತ ಕಪಟಿಯ
ಹೊತ್ತೊಯ್ದನು ದಶಕಂಠ ರಾಮನ ಅರಸಿ ಮೈಥಿಲಿಯ
ಸೆರೆಯಾಗಿಸಿದನು ರಾವಣನ ಅಯೋಧ್ಯೆಯ ರಾಣಿಯ
ಅಶೋಕವನದ ಮರಗಿಡಗಳ ಹೊರತು ಯಾರಿರಲಿಲ್ಲ ಕೇಳಲವಳ ವ್ಯಥೆಯ
ಅನುಭವಿಸಿದಳು ನೋವ ಕಂಡು ಅವಳ ಮೇಲಿನ ದಶಕಂಠನ ಆಸೆಯ
ಹುಡುಕಿದನು ರಾಮ ಅವಳ, ಪಡೆದು ಹನುಮಂತನ ಸೇವೆಯ
ಕಟ್ಟಿದರು ರಾಮಸೇತುವ ಪಡೆದು ಕೋತಿ ಸೇನೆಯ ಸಹಾಯ
ರಾವಣನ ಕೊಂದು ಬಿಡಿಸಿದನು ಸೆರೆಯಿಂದ ಸೀತೆಯ
ಆದರೂ ಕಾಪಾಡಲಿಲ್ಲ ರಾಮನ ಪ್ರೀತಿ ಜಾನಕಿಯ
ಸಾಬೀತು ಮಾಡಲೆ ಬೇಕಾಯಿತು ಅವಳನ್ನೆ ಅವಳು ಪ್ರವೇಶಿಸಿ ಅಗ್ನಿಯ
- ಶ್ರೀಕಾವ್ಯ
31 May 2017, 09:07 pm
Download App from Playstore: