ನೀರವ ಇರುಳ ಅಪ್ಪುಗೆಯಲಿ..

ದೂರ ಸರಿದರೂ ಕಾಡುವೆ
ನೀ ಏಕಾಂತದಲಿ
ಹರಿದಿದೆ ಕಂಬನಿಯ ಧಾರೆ
ನೆನೆಯುತ ನಿನ್ನ ವೇದನೆಯಲಿ
ಮರೆಯಲಾಗದೆ ನಾ
ಮುಳುಗಿರುವೆ ಮತ್ತಿನಲಿ

ತಾಳ ತಪ್ಪಿದ ಎದೆಯ
ಭಾವಗಳ ಸಂತೈಸಲು
ಮಾತಿಗೆಳೆಯುವೆ ತಾರೆಗಳ
ಹೆಪ್ಪುಗಟ್ಟಿದ ಮೌನದಲಿ
ನೀರವ ಇರುಳ ಅಪ್ಪುಗೆಯಲಿ..

- Indushekar Chinivar

31 May 2017, 10:21 pm
Download App from Playstore: