ಜನುಮದಿನ

ಜನುಮ ದಿನವು ನಿನದು
ಹರಸುವಾಸೆ ನನದು!!
ನೀ ಕೇಳಲು ನಾ ಹೇಳುವೇ
ಸವಿಮಾತಿನ ಶುಭಾಶಯ!!

ಹರಸುವೆನು ನಾನು ಇಂದು
ನೂರು ಕಾಲ ನೀ ಬಾಳೆಂದು!!
ಸವಿಮಾತಿನ ಸವಿಪ್ರೀತಿಯ
ಆಶಯ ಸುಭಾಶಯ!!

ನೀ ಜನಿಸಿದ ಈ ದಿನವು
ನನ್ನ ಒಲವಿನ ಹಾರೈಕೆ!!
ಹರುಷದಿ ನೀ ನಗುತಿರೆ
ಈ ಬದುಕಿಗೆ ಶುಭೋದಯ!!

ಈ ಬದುಕಿನ ಸಂಧಾನಕೆ
ಸಂಬಂಧವು ಚಿರನೂತನ!!
ಜನುಮ ಜನುಮ ಹೀಗೆಯೇ
ಬೆಸೆದುಕೊಳ್ಳಲಿ ಈ ಬಂಧನ!!

ನೀ ನಗುತಿರು ಖುಷಿಯಾಗಿರು
ಅನುಗಾಲವೂ ಸುಖವಾಗಿರು!!
ಸವಿಮಾತಿನ ಶುಭಾಶಯ
ಹೇಳುವುದೇ ನನ್ನ ಆಶಯ!!

- ಪಿ.ಜಿ.ಜ್ಯೋತಿ

06 Jun 2017, 06:43 pm
Download App from Playstore: