ಚಿಕ್ಕಾಸೆ...

ಮಾಂದಳಿರು ತೋರಣ ಕಟ್ಟಿ
ಮನಸಾರೆ ಮೋಹವ ಬಿತ್ತಿ
ಮುಂಗಾರು ಮೋಡದೊಲುಮೆಯ ನೆಚ್ಚಿ
ಕಾದು ಕುಳಿತೆನಲ್ಲೇ,
ನೀ ಬರುವಿಯೆಂದು ನಲ್ಲೇ...

ಬಂಡೆ ಮೇಲಿನ ಕಿರು
ಬಿರುಕಿನೊಳಗಿನ ಚಿಗುರು
ಹನಿ ನೀರು ಬಿದ್ದರೆ ಕೊನರು
ಅಲ್ಲೇ ಹಸಿ ಪ್ರೀತಿಯ ಬಿಸಿಯುಸಿರು.

ಬತ್ತಿ ಹೋದ ಕಂಗಳಲ್ಲಿ
ಇಲ್ಲ ಹನಿ ದುಃಖದ ಸೆಲೆ
ನೆತ್ತಿ ಕಾದ ಬಿರು ಬಿಸಿಲಲ್ಲಿ
ಬಾಚಿ ತಬ್ಬಿತು ಮೋಸದ ಬಲೆ.

ಮುರಿದು ಬಿದ್ದ ಒಣ ಮುದಿ ಮರ
ಮರಳಿ ತೋರಿದ ಬದುಕುವ ಛಲ
ಕೊರಡು ಕೊನರಿತು
ಎಂಬಂತಾಯಿತು...

- ಶ್ರೀಗೋ.

06 Jun 2017, 10:57 pm
Download App from Playstore: