ವ್ಯಾಮೋಹಿ ನಾನು.....
ಅತಿ ವ್ಯಾಮೋಹಿ ನಾನು
ಎದುರು ಬಂದಾಗ ನೀನು
ನೀನೆನೆ ನನ್ನ ಒಲವಿನ ಜಾನು
ಸೇರಬಹುದೇನು ನಿನ್ನ ನಾನು.......
ನಿನ್ನ ಮುಂಗುರುಳು ಆಡಲು ಜೋಕಾಲಿ
ಸೋತು ಬರುವನು ನೋಡಲು ಆ ತಂಗಾಳಿ
ತನುವ ಸೋಕಿ ತರುವ ನಗುವ ಮುಖದಲಿ
ಆ ಮುದ್ದು ನಗುವಿಗೆ ಶರಣು ನಾನು ನಿನ್ನಲಿ.........
ಕೊಂಚ ಜಾಸ್ತೀನೆ ಮೌನಿ ನೀನು
ಮೌನದ ಗಾಂಭೀರ್ಯ ಚೆಲುವಿಗೆ ಅನುರಕ್ತನು ನಾನು
ನುಡಿಯುತಿರಲು ನಿಲ್ಲದ ಮಳೆಯಂತೆ ನೀನು
ಮಾತಿನಲೆ ಮಾಡಿದೆ ಅನುರಾಗಿಯಾಗಿ ನನ್ನನು......
ನಿನ್ನ ಕಿರುಬೆರಳ ನನ್ನ ಕಿರುಬೆರಳಲಿ ಸೇರಿಸಲೇನು
ನನ್ನ ಉಸಿರಂತೆ ಕಾಯುವೆನು ನಿನ್ನ ನಾನು
ಈ ಉಸಿರಿನ ಹೆಸರೇನೆ ನೀನು
ಮಾಡಬೇಡವೆ ನನ್ನ ವಿರಹಿ ಇನ್ನೂ......
- ಶ್ರೀಕಾವ್ಯ
06 Jun 2017, 11:21 pm
Download App from Playstore: