ದಿನವೂ ನರಳುತಿರುವೆ...!!!
ಕಾಣದೆ ನಿನ್ನನು ಕಾಯುತಿದೆ ಈ ಮನಸ್ಸು
ಹತ್ತಿರ ಬಂದು ಕಣ್ಣೋಟವ ಸೆಳೆದಂತೆ
ಮೋಡದ ಮರೆಯಲಿ ಆಕಾಶವ ನೋಡುತ
ಈ ಹೃದಯ ನಿನ್ನನೆ ಅರಸುತಿದೆ
ಇರುವೆ ನೀ ದೂರ ಬಲು ದೂರ
ನಿನಗಾಗಿ ಪ್ರತಿ ಕ್ಷಣವೂ ಕಾದು ಸೋತಿರುವೆ ...
ಕಳೆಯಲಾಗದ ಈ ಸಮಯದ.. ನಡುವೆ
ಕಳೆದುಹೋದ ಕ್ಷಣಗಳ...ನೆನೆನೆನೆದು
ಮನ ಇಂದೇಕೋ ಪರಿತಪಿಸುತಿದೆ
ಒಲಿದು ಬಂದ ಕನಸು ನೀನು
ಬೇಸರವ ಮರೆಸುವ ನಿನ್ನ ಅಪ್ಪುಗೆ
ಮೌನದಲಿ ...ಕಣ್ಣುಗಳಲೇ ಸೆಳೆದು,
ಮನದಾಳದ ಒಡತಿ ನಿನಾಗಿರುವೆ ...
ದಿನವೂ ನರಳುತಿರುವೆ ನಿನ್ನ ನೆನಪುಗಳಿಂದ..
ವಿರಹದ ಈ ನೋವಿಗೆ
ಕೊನೆಯೇ ಇಲ್ಲವೆ?
- Pb
07 Jun 2017, 08:12 pm
Download App from Playstore: