"ಕಾಮ"ನ ಬಿಲ್ಲು
ಹಂಬಲಿಸುತ್ತಿದೆ ಮನ
ನೀ ಎದುರಾದ ಕ್ಷಣ
ಹರಿಶಿನದ ಮುಖ ಬಣ್ಣ
ಹಣೆಯಲ್ಲಿ ಸೂರ್ಯ ಸಿಂಧೂರ
ಇಳಿ ಬಿಟ್ಟ ಕೂದಲಿನಲ್ಲಿ
ಬಿಸಿಉಸಿರು ಬಿಟ್ಟ ಮಲ್ಲಿಗೆಯ
ಗಮಲಿನ ಅಮಲಿನಲ್ಲಿ
ಜೀವಿಸುತ್ತಿರುವೆ!
ಮತ್ತೆ ಮತ್ತೆ ನೊಡಬೇಕೆನಿಸುವ
ಈ "ನೀಲಿ ಬಣ್ಣದ ವಯಸ್ಸಿನಲ್ಲಿ"
ಬಣ್ಣ ಬಿಚ್ಚಿಟ್ಟ "ಕಾಮ"ನ ಬಿಲ್ಲಿನಂತೆ
ಕಾದಿರುವೆ ಗೆಳತಿ!
- ಹೇಮಂತ್ ತಳವಾರ
- ಹೇಮಚಂದ್ರ
08 Jun 2017, 10:39 am
Download App from Playstore: