ನೋವಾಗಿ ನಾನಿರುವೆ
ನೊಂದಿರುವ ಮನಸಲ್ಲಿ ನೋವಾಗಿ ಇರಲು ನಾನೆಂದಿಗೂ ಹಿಂಜರಿಯುವುದಿಲ್ಲ ಏಕೆಂದರೆ ನಲಿವಿನಲ್ಲಿರುವ ನಗುವಿಗಿಂತ ನೋವಿನಲ್ಲಿರುವ ಕಣ್ಣೀರಿನಹನಿಗಳೇ ಜಾಸ್ತಿ.................
ಆ ರೀತಿಯಾದರು ನಿನ್ನ ಕೆನ್ನೆಯಮೇಲಿ
ನೋವಿನಕಲೆಗಳು ತೊಳೆದುಹಾಕುವೆ
ನಿನ್ನ ಕನ್ನಲ್ಲಿನ ನನ್ನ ಕಣ್ಣೀರಹನಿಗಳೊಂದಿಗೆ..........
ಸೋತ ಮನಕ್ಕಿಂದು ಸಾಲುತಿಲ್ಲ ಸಾವಿರ ಸಮಾಧಾನದ ಮಾತುಗಳು.............
ಅವುಗಳ ಅರ್ಥತಿಳಿಯುವಷ್ಟು ತಾಳ್ಮೆಯುಳಿದಿಲ್ಲ ನನ್ನಲ್ಲಿ ಈ ಕ್ಷಣಕ್ಕೆ.................
ಮನುಜರಲ್ಲಿ ಎರಡು ರೀತಿ ಒಂದು ನೋವು ಹೆಚ್ಚಾಗಿ ಎಲ್ಲರಿಗೂ ತಿಳಿಸಿ ಆ ಕ್ಷಣಕ್ಕೆ ಸಮಾಧಾನ ಪಡುವವರು ಇನ್ನೊಬ್ಬರು ನೊಂದು ನೊಂದು ತಮ್ಮಲ್ಲಿ ತಾವೇ ಕೊರಗುವವರು..............
- ಚುಕ್ಕಿ
08 Jun 2017, 03:09 pm
Download App from Playstore: