ಜಗತ್ತೆಂಬ ಮಾರುಕಟ್ಟೆ

ಜಗತ್ತೆಂಬ ಮಾರುಕಟ್ಟೆಯಲ್ಲಿ
ಜಾಹೀರಾತೆಂಬ ಅಂಗಡಿಯಲ್ಲಿ
ಮಾರಾಟಕ್ಕಿಟ್ಟರು ಹೆಣ್ಣಿನ ಸೌಂದರ್ಯವನ್ನು
ಅವಳ ಪ್ರಾಣವಕ್ಕೆ ಬೆಲೆಕಟ್ಟಿ...........

ಜೀವನದ ಜಂಜಾಟದಲ್ಲಿ ಅವಶ್ಯಕತೆಗೆ ಮಾರುಹೋದಲೋ...............
ತಾರೆಯಾಗುವ ತವಕದಲ್ಲಿ ತನ್ನ ತಾ ಮಾರಿಕೊಂಡಲೊ ತಿಳಿಯಲಿಲ್ಲ ನೋಡುವ ವೀಕ್ಷಕರಿಗೆ ಹಂಗಿಲ್ಲದ ಮನರಂಜನೆಯಲ್ಲಿ...........

ಛಾಯಾಗ್ರಹಣ ಚಿತ್ರಣಕ್ಕಿಂದು
ತಾನೊಬ್ಬ ವಸ್ತುವಾದಲೋ.............
ಇಷ್ಟವಿಲ್ಲದ ವಸ್ತ್ರಗಳ ಧರಿಸಿ ನಿಂತಲೋ........

ಸಂಬಂಧವಿಲ್ಲದ ಸಾಮಗ್ರಿಗಳನ್ನು, ಸೌಂದರ್ಯ ವರ್ಧಕಗಳನ್ನು ಜೀವನದಲ್ಲಿ ಒಮ್ಮೆಯಾದರೂ ನೋಡದೇನೆ ತಾ ಬಳಸಿದ ವಸ್ತುಗಳೆಂದು ಪ್ರಾಚಾರಮಾಡುವಳು ಪ್ರೇಕ್ಷಕರ ಮನದಲ್ಲಿ ಖರೀದಿಸುವ ಆಸೆ ತರೆಸುವಳು............

ಚಿಂದಿನಿಲುವoಗಿಯುಟ್ಟು ಕಾಲಿಗಾಕುವ
ಚಪ್ಪಲಿಯ ಕೈಯಲೊತ್ತು ಅತ್ತಿತ್ತ ಓಡಾಡುವಳು
ಅಂದ-ಚಂದವ ಬಳಕಿಸುತ್ತಾ ಮಾರಾಟಗಾರರ
ಕೈಯಲ್ಲಿ ಲಕ್ಷಘಟ್ಟಲೇ ಹಣವ ಸುರಿಸುತ್ತಾ.........

ಜೀವನಪರ್ಯಂತ ದುಡ್ಡಿನಲ್ಲಿ ತೇಲಿಯಾಡಿದರು
ಒಮ್ಮೆ ನೆನೆವಳು ಅವಳು ತನ್ನದಲ್ಲದ ಲೋಕದಲ್ಲಿ ತಾನೊಂದು ಗೊಂಬೆಯಾದೇನೆಂದು............

ಜಗತ್ತೆಂಬ ಮಾರುಕಟ್ಟೆಯಲ್ಲಿ ಜೀವವಿಲ್ಲದೇನೆ ಜೀವಿಸುತ್ತಿದ್ದೇನೆಂದು................

- ಚುಕ್ಕಿ

08 Jun 2017, 08:29 pm
Download App from Playstore: