ಹೆಣ್ಣೇ....

ಯಾರ ನಂಬಿ ಬದುಕುವೆ ಹೆಣ್ಣೆ ನೀನು
ನಿನಗಾರು ಇರುವರು ನಿನ್ನವರಾಗಿ
ಯಾರು ಬರುವರೆ ನಿನ್ನ ಜೊತೆಯಾಗಿ
ಯಾರ ಜೊತೆ ನೀ ಇರಲಾಗವುದೆ ನೀನು ನೀನಾಗಿ

ನಗುವಿನ ಮುಖವಾಡವೆ ನಿನಗೆ ಒಡವೆ
ಯಾತಕೆ ನಗುವ ಎಲ್ಲೆಲ್ಲೊ ಹುಡುಕುವೆ
ಬಿಟ್ಟುಬಿಡೆ ಅದ ಹುಡುಕುವ ಗೊಡವೆ
ನೀ ನೀನಾಗಿ‌ ಬದುಕಲು ಈ ಭೂಮಿಯಲಿ‌ ಸಾಧ್ಯವೆ

ಯಾರದೊ ಖುಷಿಯ ನಗುವ ನೋಡಿ ನೀ ನಗುವೆ
ಇನ್ಯಾರದದೊ ನೋವಿಗೆ ಮರುಗಿ ನೀ‌ ಕರಗುವೆ
ನಿನ‌ ನಿಜ ಮನಸ ಅರಿಯಲು ಯಾರು ಇಲ್ಲವೆ
ನಗಿಸಿ‌ ನಗುವುದ ಕಲಿಯುವೆ ಇವುಗಳದೆ ನಡುವೆ

ನಿನ್ನವರೆ ನಿನಗೆ ಕಡಿವಾಣ ಹಾಕುವರಲ್ಲವೆ
ಮತ್ತೆಲ್ಲೊ ನಿನ್ನ ಅರಿಯುವರೆನ್ನುವುದು‌ ಸುಳ್ಳಲ್ಲವೆ
ನಿನ್ನನೆ ಕಾಡುವುದು‌ ಜಗವು ಇದು ತರವೆ
ಕಂಡರು ಕಾಣದಂತೆ ಸಹಿಸಿ ತಾಳಿ ಬದುಕುವೆ
ಜಗವನೆ‌ ಎದುರಿಸಿ ಗೆಲುವ ಶಕ್ತಿ ನಿನ್ನೊಳಗಿಲ್ಲವೆ?....

- ಶ್ರೀಕಾವ್ಯ

08 Jun 2017, 10:52 pm
Download App from Playstore: