ನೀ ಬಂದೆ ಬಾಳಲಿ ಗೆಳತಿ...ಬೆಳಕಾಗಿ

ನೀ ಬಂದೆ ಬಾಳಲಿ ಗೆಳತಿ...ಬೆಳಕಾಗಿ
ನಾ ಉರಿಯುತಲಿದ್ದೆ ಬೆಳಕಿಲ್ಲದ ದೀಪವಾಗಿ
ಉಸಿರಲಿ ನೆಲೆಸಿ ನೀ...ನಾನಾದೆ
ಬದುಕಿರಲು ಕಾರಣ ನಾ...ನೀನಾದೆ

ಎಲ್ಲಿಂದ ಹೊರಟೆ ,ಎಲ್ಲಿಗೆ ತಲುಪುವುದು
ಅರಿವಿಲ್ಲದೆ ನಡೆದಿತ್ತು ಬದುಕ ಬಂಡಿ...ಹೀಗೆ
ಸಾಗುತಲಿದ್ದೆ , ಹಾದಿ ಸವೆಸುತಾ
ಕಂಗಳಲಿ ಆಸೆಯ ದೀಪ ಉರಿಸುತಾ‌
ನಿನ್ನ ಹುಡುಕುತಾ...

ನನ್ನಂತರಾಳದ ಕೂಗು ನಿನ್ನಲ್ಲಿ ತಲುಪಿ
ಸಿಕ್ಕೆ ನೀ...ನನಗಾಗಿ ಕಾಯುತಲಿದ್ದೆ...
ಭರವಸೆಯ ಹಗಲು ಬದುಕಿಗೆ
ನೆಮ್ಮದಿಯ ಇರುಳು ಬಾಳಿಗೆ ನೀಡಲು...
ಮಿಡಿದೆ...ನೆಲೆಸಿದೆ ಎದೆಗೂಡಲಿ
ಸಾಗಿದೆ ಪಯಣ ನಿನ್ನೊಡನೆ ಶಾಂತಿಯ ತಾಣಕೆ...

- Indushekar Chinivar

09 Jun 2017, 08:39 am
Download App from Playstore: