ಇಂದಿನ ಮಕ್ಕಳು.....

ಅಮ್ಮನ ಕೈ ತುತ್ತಿನ‌ ಪ್ರೀತಿ ಗೊತ್ತಿಲ್ಲ
ಆ ಚೆಂದಮಾಮನ ತೋರಿ ತಿನ್ನಿಸುವವರಿಲ್ಲ
ಕಥೆ ಹೇಳುವ ಅಜ್ಜಿ ಅಮ್ಮಂದಿರನ್ನಂತು ನೋಡಿಯೆ ಇಲ್ಲ
ಬಾಲ್ಯದ ತುಂಟಾಟ ಖುಷಿಯ ಅನುಭವಿಸಿಲ್ಲ

ಚಿನ್ನಿದಾಂಡು ಲಗೋರಿಯನ್ನಂತು ಕಂಡವರೆ ಅಲ್ಲ
ಅಳಿಗುಳಿ‌ಮನೆ ಚೌಕಬಾರಗಳಂತು ಹೇಗಿರಬಹುದೆಂದು ತಿಳಿದಿರಲಿಕ್ಕಿಲ್ಲ
ಕುಂಟೆ ಬಿಲ್ಲೆ ಅಣ್ಣೆಕಲ್ಲಿನಂತ ಆಟಗಳನು ಮತೊಮ್ಮೆ ನೋಡಲಾಗುವುದಿಲ್ಲ
ಸ್ನೇಹಿತರ ಜೊತೆ ಊರ ಸುತ್ತಿ ಆಡಲಂತು ಇವರ ಬಿಡುವುದೇ ಇಲ್ಲ

ಮಣ್ಣಿನ ಪ್ರೀತಿಯ ಸಖ್ಯವ ಬಲ್ಲವರಲ್ಲ
ಮರಕೋತಿ ಆಟವನ್ನಂತು ನೋಡಿಯೆ ಇಲ್ಲ
ಮಣ್ಣಲಿ ಆಡಿ ಸಂತಸ ಪಡಲು ಮಣ್ಣೆ ಕಾಣುವುದಿಲ್ಲವಲ್ಲ
ಮರವೇರಿ ಆಟವಾಡಿ ಹುಬ್ಬಿ ಬೀಗಲು ಮರಗಳಿರಬೇಕಲ್ಲ

ಮಣಬಾರ ಪುಸ್ತಕ ಹೊತ್ತು ದಿನ ತಿರುಗುವರು
ಸಾಮಾನ್ಯ ಬದುಕಿನ ಜ್ಞಾನವ ಅರಿಯಲಾಗದವರು
ಅಕ್ಕ ಪಕ್ಕದ ಜನರನ್ನೆ ನೋಡಲಾಗದವರು
ಮನೆಯೊಳಗೆ‌ ಸೇರಿ ಸೊರಗುತಿರುವರು
ಸಣ್ಣ ನೋವು ಸೋಲಿಗು ನಲುಗಿ ಹೋಗುವರು
ಸಣ್ಣ ಖುಷಿಯ ಸವಿಯನು ಸವಿಯದೆ ಮಂಕಾಗುವರು
ಬದುಕಿನ ಸ್ವಾರಸ್ಯವ ಅನುಭವಿಸಲಾರದೆ ಹೋಗಿರುವರು
ಬಾಲ್ಯದ ಚೆಲ್ಲಾಟ ತುಂತಾಟ ಖುಷಿಯ ಕಾಣದೆ ಬದುಕುತ್ತಿರುವರು
ಬಾಳಿದು ಇಂದಿನ ಮಕ್ಕಳ ಬಾಳಿದು

- ಶ್ರೀಕಾವ್ಯ

09 Jun 2017, 07:06 pm
Download App from Playstore: