ವಿದಾಯ....
ಯಾರು ನೀವೆಲ್ಲರು ನಾ ಕಾಣೆ
ಎಲ್ಲರು ಬೆರೆತು ಮಾತಾಡಿ ನೋವ ಮರೆಸಿದಿರಿ ನನ್ನಾಣೆ
ಗೆಲ್ಲುವ ಶಕುತಿ ಮನಸುಂಟು ನಿಮ್ಮಲಿ ಜಗವನ್ನೆ
ಅರಿಯದೆ ನೋಯಿಸಿದ್ದರೆ ಕ್ಷಮಿಸಿ ಬಿಡಿ ಸುಮ್ಮನೆ
ಕಲರವದೊಳು ಮರೆತು ಬಿಟ್ಟಿದ್ದೆ ನನ್ನನ್ನೆ
ಕನ್ನಡ ಕವನವಿದು ಉದಯೋನ್ಮುಖ ಬರಹಗಾರರ ತಾಣ
ಬರೆಯುವರೆಲ್ಲರು ಸುಂದರ ಕವಿತೆಗಳ ತೊಟ್ಟು ಪಣ
ಮನಸ ಭಾವ ಬಂಧನಗಳ ಬಿಡಿಸಿಡುವರು ಕವನಗಳಲೆ
ಯಾರು ಅರಿಯದವರ ಸುಖ ದುಃಖಗಳು ಹರಿದು ಬರುವವು ಪದಗಳಲೆ
ನಾನು ಸೇರಿ ಕಳೆದು ಹೋದೆನು ಕವನಗಳ ಮಧ್ಯದಲ್ಲೆ
ತುಂಬಿದಿರಿ ನನ್ನೊಳು ಬರೆಯುವ ಹಂಬಲ
ನಿಮ್ಮೆಲ್ಲರ ಸಹಕಾರ ಹುಟ್ಟಿಸಿತು ಬರೆಯುವ ಚಲ
ನಿಮ್ಮೆಲ್ಲರ ಸಹಕಾರ ಪ್ರೀತಿಗೆ ನಾನೆಂದು ಆಭಾರಿ
ನೀವೆಂದು ಬಾಳಲಿ ನಗುನಗುತ ಬಾಳಿರಿ
ನನ್ನೊಳಗಿನ ನನ್ನನು ಪರಿಚಯಿಸಿತು ಕನ್ನಡ ಕವನ
ನಿಮಗೆ ನನ್ನಯ ಮನಃಪೂರ್ವಕ ನಮನ
ಬರೆಯುವ ಕನಸು ನನಸಾದ ಜಾಗವಿದು, ಎಂದೂ ಮಾಡುವೆನು ಕವನದ ಮನನ
ಎಂದಿಗೂ ನಿಲ್ಲದೆ ಸಾಗುತಿರಲಿ ಕವಿಗಳ ಸೃಷ್ಟಿಸುತ್ತಿರುವ ಸಾಧನ
ಹೇಳೆಬೇಕೆನಿಸುತಿದೆ ಇಂದು ವಿದಾಯ
ಹೊತ್ತುಯ್ಯುತ್ತಿರುವೆನು ನೀವೆಲ್ಲ ನೀಡಿದ ಸದಾಷಯ
ನೀವೆಲ್ಲರು ತಿದ್ದಿದಿರಿ ನನ್ನ ನೀಡಿ ನಿಮ್ಮ ಅಭಿಪ್ರಾಯ
ಎಂದಿಗೂ ಜತನ ಮಾಡುವುದು ಅವುಗಳ ನನ್ನೀ ಹೃದಯ
ತುಂಬು ಮನಸಿನ ಧನ್ಯವಾದಗಳು ಎಲ್ಲರಿಗೂ
ನಿಮ್ಮ ಅಭಿಪ್ರಾಯ ಪ್ರೋತ್ಸಾಹಗಳೊಟ್ಟಿಗೆ ನನ್ನನ್ನು ಒಪ್ಪಿ ಸಹಕರಿಸಿದ್ದಕ್ಕೆ, ನಾನೆಂದು ಚಿರಋಣಿ....
- ಶ್ರೀಕಾವ್ಯ
10 Jun 2017, 09:55 pm
Download App from Playstore: