ನಿನ್ನ ಉಸಿರಲಿ.......
ಗೆಜ್ಜೆಕಟ್ಟಿ ಹೆಜ್ಜೆ ಹಿಡುತಿರುವೆ ನಿನ್ನ
ಎದೆಬಡಿತದ ತಾಳಕ್ಕೆ ಘಲ್ಲು ಘಲ್ಲೆಂದು......
ನಿನ್ನ ಪ್ರೀತಿಯ ಕುಣಿತದಲ್ಲಿ ಪಾದದಿಂದ
ಚುಂಬಿಸುತ್ತಿರುವೆ
ಈ ಭುವಿಯನ್ನು ನಿನ್ನ ಮನಸೆಂದು...
ನೂರೆಂಟು ಬಣ್ಣಗಳೊತ್ತು ನಾ ಉಟ್ಟ
ವಸ್ತ್ರಗಳ ಅಂಚುಗಳಿಗೆ ಹಂಚುತಿರುವೆ
ನಗುವಚೆಲ್ಲುತ ನನ್ನ ಸೊಗಸನ್ನು...
ನಿನ್ನ ನಗುವಲ್ಲಿ ಮಿಂದು ಬಂದ
ನನ್ನ ನಗುವಿನ ಹೊಳಪಿಗಿಂದು
ಹೊಸತನದ ಸೋಬಗಿನ ಶ್ವೇತವರ್ಣವ
ನೋಡಿ ನಾ ಸೋತೆ ನಿನಗಾಗಿ...
ಈ ಅಪೂರ್ವ ನೃತ್ಯಕ್ಕೆ ಹತ್ತು ರಾಘಗಳ
ಬೆರೆಸಿದ ಸ್ವರಗಳಿಗಿಂದು ಅದನ್ನಾಡಿದ ನಿನ್ನ
ಧ್ವನಿಗೆ ಪ್ರೀತಿಯ ಚುಂಬನ ಸಂಗಾತಿ...
- ಚುಕ್ಕಿ
11 Jun 2017, 07:43 pm
Download App from Playstore: