ನಮ್ಮ ಹೈಸ್ಕೂಲ್ ಮಾಸ್ಟರ್
ನಮಗೆ ಇದ್ದರು ಒಬ್ಬರು ಮಾಸ್ಟರ್
ಅವರ ನಡಿಗೆ ತುಂಬಾ ಟೆರರ್.!
ಅವರು ಮಾಡುತ್ತಿದ್ದರು ಪಾಠ ತುಂಬಾ ಹಾನರ್
ಅವರ ಕಂಡರೆ ಹುಡುಗರು ಢರ್ ಢರ್.!
ಅವರೇ ನಮ್ಮ ಮುಖ್ಯ ಶಿಕ್ಷಕರು ಶಶಿಧರ್ ಸರ್
ಕನ್ನಡಕ್ಕೆ ಬರುತ್ತಿದ್ದರು ಒಬ್ಬರು ಮಾಸ್ಟರ್
ಅವರ ಪಾಠ ಕೇಳುವ ನಾವು ಹೇಳುತ್ತಿದ್ದೆವು ವ್ಹಾವ್ ವ್ಹಾವ್!
ಅವರು ಹೊಡೆಯುತ್ತಿದ್ದರು ಬರುವಂತೆ ಬಾವು
ಅದಕ್ಕೆ ಕೊಡುತ್ತಿದ್ದೆವು ಉಪ್ಪಿನ ಕಾವು.!
ಅವರೇ ನಮ್ಮ ನೆಚ್ಚಿನ ಲಕ್ಷ್ಮಣರಾವ್ ಸರ್.!
ಇಂಗ್ಲಿಷ್ಗೆ ಬರುತ್ತಿದ್ದರು ನಮ್ಮೆಲ್ಲರ ಪ್ರೀತಿಯ ಮಾಸ್ಟರ್
ಮಾಡುತ್ತಿದ್ದರು ಇಂಗ್ಲಿಷ್ ಗ್ರಾಮರ್ ಸೂಪರ್.!
ಅದನು ಕೇಳಿ ಪಡೆದೆ ಸಿಇಟಿಯಲ್ಲಿ ಮಾರ್ಕ್ಸ್ ಬಂಪರ್
ಇದರಿಂದಲೆ ಬಂತು ಎನಗೆ ಕೆಲಸದ ಆಫರ್.!
ಇವರ ಅದ್ಬುತ ಪಾಠವ ಕೇಳಿದವರು ಆದರು ಈಗ ಮಾಸ್ಟರ್
ಪಾಠವ ಕೇಳದವರು ಆದರು ಈಗ ಇಂಗ್ಲಿಷ್ ನಲ್ಲಿ ಪಾಪರ್.!
ಇವರ ಪಾಠವ ಕೇಳಿದವರ ಜೀವನ ಮುಂದೆ ಸೂಪರ್..!
ಅವರೇ ನಮ್ಮ ಪ್ರೀತಿಯ ಶಿವಕುಮಾರ್ ಸರ್.!
ಹಿಂದಿಗೆ ಬರುತ್ತಿದ್ದರು ನಮ್ಮ ಅಚ್ಚುಮೆಚ್ಚಿನ ಮಾಸ್ಟರ್
ಅವರು ಹೇಳುತ್ತಿದ್ದರು ಶಾಲೆಗೆ ಸರಿಯಾಗಿ ಬಾರಯ್ಯ.!
ಬಾರದಿದ್ದರೆ ಆಗುವುದು ನಿನ್ನ ಜೀವನ ಗೋಳಯ್ಯ.!
ಅವರ ಪಾಠಕೆ ಸರಿಸಾಟಿಯಿಲ್ಲ ಯಾವುದೇ ಐಎಎಸ್ ರಾಮಯ್ಯ.!
ಅವರಿರಲು ತರಗತಿಯಲಿ ಬಾರದು ಬೇಸರ ಕೇಳಯ್ಯ.!
ಅವರ ಬಗ್ಗೆ ವರ್ಣಿಸಲು ಪದಗಳು ಸಿಗವಯ್ಯ..!
ಅವರೇ ನಮ್ಮ ಅಚ್ಚುಮೆಚ್ಚಿನ ಶ್ರೀರಾಮಯ್ಯ ಸರ್..!
ರಚನೆ.
ನಿಮ್ಮ ಪ್ರಕುಲ್
- ಪ್ರಕುಲ್
12 Jun 2017, 06:44 am
Download App from Playstore: