ಎಲ್ಲಿಂದೆಲ್ಲೊ ಬಂದವರು

ಮನದೊಳಗಿನ ಮನೆಗೆ
ಎಲ್ಲಿಂದೆಲ್ಲೊ ಬಂದಿದ್ದಾರೆ
ಎಲ್ಲಿಂದೆಲ್ಲೊ ಕರೆದೊಯ್ಯುತ್ತಾರೆ
ನವಿಲು ನಾಟ್ಯದಂತೆ

ಯಾರಿವರು?
ಬಣ್ಣಗಳನ್ನು ಬಣ್ಣಿಸಿ
ಕಣ್ಣಿನ ಎಂಜಲು
ತರಿಸುತ್ತಿದ್ದಾರೆ ಅವಳ ಕುರಿತು

ಯಾರಿವರು?
ಕಾಲ್ಗೆಜ್ಜೆ ಸದ್ದಿಗೆ
ಮೈ ಜುಂ ಎಂದು
ಕೆರಳುಸುವರು ಯಾರು

ಯಾರಿವರು?
ಚಿಂತೆ ಇಲ್ಲದ ಚಿತ್ತ ಚಿತ್ರಿಸಿ
ಚಕ್ರದಂತೆ ತಿರುಗಿಸುತಿದ್ದಾರೆ
ಮರಳಿ ಹೊರಟುವರ

ಈ ಯವ್ವನದ
ಮನೆಯಲ್ಲಿ ತಿಳಿಯದ
ಜಿವಿಸುತ್ತಾರಿ ಯಾರವರು
ನನ್ನ ಮೈ ತುರಿಕಿಸಿಕೊಳ್ಳುವವರು!?

- ಹೇಮಚಂದ್ರ

12 Jun 2017, 04:11 pm
Download App from Playstore: